ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸಹಕರಿಸಿ

01
Published on

ಕೊಡೇಕಲ್ : ಪ್ರತಿ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಎಲ್ಲ ಸದಸ್ಯರು ಸಹಕರಿಸಬೇಕು ಎಂದು ಬರದೇವನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಳಪ್ಪ ಢವಳಗಿ ಮನವಿ ಮಾಡಿದರು.

ಬರದೇವನಾಳ ಗ್ರಾಪಂನಲ್ಲಿ ಶುಕ್ರವಾರ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಕೆಲ ಗ್ರಾಮಗಳಲ್ಲಿ ಕಾಲರಾ, ಡೆಂಘೆ, ಮಲೇರಿಯಾ ಸೇರಿ ಇನ್ನಿತರ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಆದ್ದರಿಂದ ಸದಸ್ಯರು ನಿತ್ಯ ತಮ್ಮ ವ್ಯಾಪ್ತಿಗೆ ಬರುವ ವಾರ್ಡ್ಗಳಿಗೆ ಭೇಟಿ ನೀಡಿ ಸ್ವಚ್ಛತೆ ಕಡೆ ಹೆಚ್ಚಿನ ಗಮನಹರಿಸಬೇಕು ಕಿವಿ ಮಾತು ಹೇಳಿದರು.

ಬಪ್ಪರಗಿ ಮತ್ತು ಉಪ್ಪಲದಿನ್ನಿ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಕುರಿತು ಸದಸ್ಯರೊಬ್ಬರು ಅಧ್ಯಕ್ಷರ ಗಮನಕ್ಕೆ ತಂದಾಗ, ತಾಪಂ ಇಒ ಅವರೊಂದಿಗೆ ಮಾತನಾಡಿ ಹೊಸ ಕೊಳವೆಬಾವಿ ಕೊರೆಸುವ ಮೂಲಕ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷೆ ತಾರಾಬಾಯಿ, ಸದಸ್ಯರಾದ ರವಿ ರಾಠೋಡ್, ಶಾಂತಗೌಡ ಮಾಲಿಗೌಡ, ಶಂಕರಗೌಡ ಮಾಲಿ ಪಾಟೀಲ್, ಹುಲಗಪ್ಪ ಬಿರಾದಾರ, ಹಣಮಂತ್ರಾಯ ಸಾಳಿ, ಸಂತೋಷ ಪವಾರ್, ಸೋಮಿಬಾಯಿ, ಇಂದಿರಾಬಾಯಿ, ಮುದಕಮ್ಮ, ದೇವಮ್ಮ, ಕಸ್ತೂರಿಬಾಯಿ, ಹುಲಗಮ್ಮ, ಭೀಮಬಾಯಿ, ಧನ್ನುಬಾಯಿ, ಖೀರಪ್ಪ ಇದ್ದರು. ಕರ‍್ಯದರ್ಶಿ ಅಮೃತರಾವ್ ದೇಸಾಯಿ ನಿರೂಪಣೆ ಮಾಡಿದರು. ಎಸ್.ಎಸ್.ನಂದಿಕೋಲಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net