

ಚಾಮರಾಜನಗರ: ಯೋಗ ಎಂಬುದು ಅದ್ಭುತ ಶಕ್ತಿಯಾಗಿದ್ದು, ಹಲವಾರು ಕಾಯಿಲೆಗಳನ್ನು ಗುಣಪಡಿಸುವುದರ ಮೂಲಕ ಆರೋಗ್ಯಯುತ ಜೀವನಕ್ಕೆ ಸಹಕಾರಿಯಾಗಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರಿಜೀ ಹೇಳಿದರು.
ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಚಾ.ನಗರ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾನಸಿಕ, ಶಾರೀರಿಕ, ಸಾಮಾಜಿಕಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಧಾರಿಸಲು ಯೋಗ ಸಹಕಾರಿಯಾಗಿದೆ. ರಾಜಯೋಗ ಮನಸ್ಸನ್ನು ನಿರ್ಮಲ ಶರೀರವನ್ನು ಶೀತಲ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಾಜಯೋಗ ಸರ್ವ ರೋಗಗಳನ್ನು ನಿರ್ಮೂಲನೆ ಮಾಡುವ ಸಿದ್ಧೌಷದವಾಗಿದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ಕಾರ್ಯದರ್ಶಿ ಸಂತೋಷ್ ಇನ್ನರ್ವೇಲ್ ಸಂಸ್ಥೆಯ ಅಧ್ಯಕ್ಷೆ ಪೂಜಾ, ವರ್ತಕ ಶ್ರೀನಿವಾಸ್ ಮಾತನಾಡಿದರು. ಯೋಗ ಪ್ರಕಾಶ್, ಓಂ ಶಾಂತಿ ನ್ಯೂ ಸರ್ವಿಸ್‌ನ ಬಿ.ಕೆ.ಆರಾಧ್ಯ, ಎಸ್‌ಬಿಐ ಶ್ರೀನಿವಾಸ್, ರೇಷ್ಮೆ ನಿವೃತ್ತ ಜಿಲ್ಲಾಧಿಕಾರಿ ನಾರಾಯಣಶೆಟ್ಟಿ, ಅಕ್ಷತಾ ಜೈನ್, ಮಹಾಲಕ್ಷ್ಮಿ, ಪುಟ್ಟ ಶೇಖರಮೂರ್ತಿ ಹಾಗೂ ಇತರರು ಹಾಜರಿದ್ದರು.