

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನುಷ್ಯನಿಗೆ ಬಾಹ್ಯ ಸೌಂದರ್ಯದಷ್ಟೇ ಆಂತರಿಕ ಸೌಂದರ್ಯ ಮುಖ್ಯ. ಇವೆರಡನ್ನೂ ಚೆನ್ನಾಗಿ ಇಟ್ಟುಕೊಳ್ಳಲು ಯೋಗ ಅಗತ್ಯವಾಗಿದೆ ಎಂದು ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಶ್ರೀನಿವಾಸ ನಾಡಗೀರ ಹೇಳಿದರು.
ನಗರದ ಕ್ಲಾಸಿಕ್ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಏರ್ಪಡಿಸಿದ್ದ ವಿಶ್ವ ಯೋಗ ಹಾಗೂ ವಿಶ್ವ ಸಂಗೀತ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆ. ಇದು ಭಾರತವು ಜಗತ್ತಿಗೆ ನೀಡಿದ ಹೆಮ್ಮೆಯ ಕೊಡುಗೆಯಾಗಿದೆ ಎಂದರು.
ಡಾ.ಎಂ.ವೈ. ಸಾವಂತ ಮಾತನಾಡಿ, ಯೋಗವು ನಮ್ಮ ದೇಹ, ಮನಸ್ಸು ಮತ್ತು ಆತ್ಮವನ್ನು ಒಟ್ಟಿಗೆ ಜೋಡಿಸುವ ಒಂದು ಕಲೆ. ಅದು ನಮ್ಮನ್ನು ಸಧೃಡವಾಗಿರಿಸಿ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆ ಪ್ರಾಚಾರ್ಯ ಮನೋಹರ ಕೆಂಚರಾಹುತ ಮಾತನಾಡಿ, ಇಂದು ಯೋಗ ಹಾಗೂ ಸಂಗೀತ ದಿನ ಆಚರಿಸುತ್ತಿರುವುದು ನಮ್ಮ ಸುಯೋಗ. ಯೋಗವು ಮನಸ್ಸು ವತ್ತು ಮನುಷ್ಯನ ನಡುವೆ ಸಾಮರಸ್ಯ ಉಂಟು ಮಾಡುತ್ತದೆ ಎಂದರು.
ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು.