ಆರೋಗ್ಯದತ್ತ ಗಮನ ನೀಡಿ ಬದುಕನ್ನು ಸುಂದರವಾಗಿಸಿಕೊಳ್ಳಬೇಕು: ಡಾ.ಬಿ.ಆರ್.ಹಾಲೇಶ್

ಆರೋಗ್ಯದತ್ತ ಗಮನ ನೀಡಿ ಬದುಕನ್ನು ಸುಂದರವಾಗಿಸಿಕೊಳ್ಳಬೇಕು: ಡಾ.ಬಿ.ಆರ್.ಹಾಲೇಶ್
Published on

ಹಾಸನ: ಮನುಷ್ಯನಲ್ಲಿ ಆರೋಗ್ಯ ಭಾಗ್ಯ ಇಲ್ಲದಿದ್ದರೆ ಎಷ್ಟೆ ಕೋಟಿ ಹಣ ಸಂಪಾದನೆ ಮಾಡಿದ್ದರೂ ಪ್ರಯೋಜನಕ್ಕೆ ಬರುವುದಿಲ್ಲ. ಮೊದಲು ಆರೋಗ್ಯದತ್ತ ಗಮನ ನೀಡಿ ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಎಂದು ಮಧುಮೇಹ ತಜ್ಞ ಮತ್ತು ಹಿಮ್ಸ್ ಸಹ ಪ್ರಾಧ್ಯಾಪಕ ಡಾ.ಬಿ.ಆರ್.ಹಾಲೇಶ್ ಕಿವಿಮಾತು ಹೇಳಿದರು.

ನಗರದ ಹಾಸನಾಂಬ ಚೌಡೇಶ್ವರಿ ದೇವಾಲಯದ ಮುಂಭಾಗದಲ್ಲಿರುವ ಶ್ರೀರಾಮ ಮಂದಿರದ ಆವರಣದಲ್ಲಿ ಹಾಸನ ಜಿಲ್ಲಾ ದೇವಾಂಗ ಸಂಘದ ಸಹಯೋಗದಲ್ಲಿ ಹಾಸನ ದೇವಾಂಗ ಜಿಲ್ಲಾ ನೌಕರರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ದೇವಾಂಗ ಕುಲಬಾಂಧವರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಹದಲ್ಲಿ ಅನೇಕ ಖಾಯಿಲೆಗಳು ಬರಬಹುದು. ಮುಂಜಾಗ್ರತೆಯಿಂದ ಕಾಲಕಾಲಕ್ಕೆ ಶುಗರ್, ಬಿಪಿ, ರಕ್ತ ಪರೀಕ್ಷೆ, ಇಸಿಜಿ, ಕೊಲೆಸ್ಟ್ರಾ ಇತರೆ ತಪಾಸಣೆಯನ್ನು ಮಾಡಿಸಿಕೊಂಡರೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದರು.

ಜಿಲ್ಲಾ ಆರೋಗ್ಯ ಇಲಾಖೆಯ ತಾಲೂಕು ಅಧಿಕಾರಿ ಡಾ. ವಿಜಯ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಆರೋಗ್ಯಕರ ಆಹಾರವನ್ನು ಸೇವಿಸುತ್ತಿಲ್ಲ. ಜಂಕ್ ಫುಡ್‌ನ್ನು ಹೆಚ್ಚಿನ ರೀತಿ ಸೇವಿಸಿ ಅನೇಕ ಖಾಯಿಲೆಗಳನ್ನು ನಮ್ಮಬಳಿಗೆ ನಾವೆ ಕರೆಯುತ್ತಿದ್ದೇವೆ ಹಾಗಾಗಿ ಆಹಾರ ಪದ್ಧತಿಯಲ್ಲೂ ಕೂಡ ವೈದ್ಯರ ಸಲಹೆ ಪಡೆದು ಸೇವಿಸಿದರೇ ಉತ್ತಮ. ಪ್ರತಿನಿತ್ಯ ಕೆಲ ಸಮಯಗಳ ಕಾಲ ವ್ಯಾಯಾಮ ಮತ್ತು ಧ್ಯಾನ ಮಾಡಿದರೇ ಖಾಯಲೆಯಿಂದ ದೂರವಿದ್ದು,ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದಾಗಿದೆ. ಯಾವುದೇ ಖಾಯಿಲೆ ಇದ್ದರೂ ಪ್ರಾರಂಭದಲ್ಲೆ ತಪಾಸಣೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಇಂತಹ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ನಾಗೇಶ್ ಕುಮಾರ್ ಮಾತನಾಡಿ, ಪ್ರಸ್ತುತದ ಜೀವನಶೈಲಿಯಲ್ಲಿ ಹೆಚ್ಚಿನ ರೀತಿ ಹೃದಯ ಸಂಬಧಿಸಿದ ಖಾಯಿಲೆಗಳು ಕಾಣಿಸಿಕೊಳ್ಳುತ್ತಿದೆ. ಎಲ್ಲಾ ಖಾಯಿಲೆಗಳಿಗೆ ಆರೋಗ್ಯ ತಪಾಸಣೆ ಮಾಡಲು ಹೆಚ್ಚಿನ ವೈದ್ಯರು ಬಂದಿರುವುದು ನಮಗೆ ಸಂತೋಷ ತಂದಿದೆ. ಈ ಶಿಬಿರಕ್ಕೆ ಬಂದವರಿಗೆ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ ಅನೇಕ ಮಾಹಿತಿಯನ್ನು ಎಂದರು. ಉಚಿತ ಆರೋಗ್ಯ ಶಿಬಿರದಲ್ಲಿ ಹಿರಿಯ ತಜ್ಞ ವೈದ್ಯ ಡಾ. ಎಚ್.ಎನ್. ರಾಜೇಶ್, ನೇತ್ರ ತಜ್ಞ ಡಾ. ಕೆ. ಸಂದೀಪ್, ತುರ್ತು ಚಿಕಿತ್ಸಾ ತಜ್ಞ ಡಾ.ಬಿ.ಎಂ. ಸುಹಾಸ್, ಸರ್ಜನ್ ಡಾ. ಸಚೀನ್, ಸ್ತ್ರೀರೋಗ ತಜ್ಞೆ ಡಾ.ಪೂಜಾ, ಶಸ್ತ್ರ ಚಿಕಿತ್ಸ ತಜ್ಞ ಡಾ. ಆನಂದ್, ಆಹಾರ ತಜ್ಞೆ ಡಾ.ಧನುಶ್ರೀ, ಶಿವರಾಜು, ಲೋಕೆಶ್, ಮಾರುತಿ, ರಾಘವೇಂದ್ರ, ಸವಿತಾ, ಗೀತಾ ಹಾಗೂ ಶಾಂತಿಗ್ರಾಮದ ಮಂಜೇಶ್, ದೇವಾಂಗ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ್, ಶ್ರೀರಾಮ ಮಂದಿರದ ಅಧ್ಯಕ್ಷ ಜ್ಞಾನೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net