

ಚಿತ್ರದುರ್ಗ: ಅಪರಾಧಗಳ ನಿಯಂತ್ರಣಕ್ಕೆ ಶ್ರಮಿಸುವ ಹಾಗೆಯೇ ತಮ್ಮ ಆರೋಗ್ಯದ ರಕ್ಷಣೆಗೂ ಪೊಲೀಸರು ವಿಶೇಷ ಕಾಳಜಿ ವಹಿಸುವುದು ಅಗ ತ್ಯವಿದೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಹೇಳಿದರು. ಜಿಲ್ಲಾ ಪೊಲೀಸ್ ಇಲಾಖೆ,ಇಂಡಿಯಾನ ಹಾರ್ಟ್‌ಸೆಂಟರ್ ಸಂ ಯುಕ್ತಾಶ್ರಯದಲ್ಲಿ ನಗರದ ಡಿಎಆರ್ ಕಚೇರಿ ಆವರಣದಲ್ಲಿ ಶುಕ್ರವಾರ ಪೊಲೀಸರು ಹಾಗೂ ಅವರ ಕುಟುಂಬದವರಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಐದು ದಿನಗಳ ಯೋಗ ಶಿಬಿರ ಸಮಾರೋಪ ಕಾರ‌್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಪರಾಧಗಳ ಕಡಿವಾಣಕ್ಕೆ ತರಬೇತಿ,ಮೇಲುಸ್ತುವಾರಿ ಇರುತ್ತದೆ,ಆದರೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಶಿಬಿರ,ಆ ಟೋಟಗಳನ್ನು ಇಲಾಖೆ ಏರ್ಪಡಿಸಬಹುದಾಗಿದ್ದರೂ,ವರ್ಷದ 365 ದಿನಗಳೂ ಉತ್ತಮ ದೈಹಿಕ,ಮಾನಸಿಕ ಸ ದೃಢತೆಯನ್ನು ಕಾಪಾಡಿ ಕೊಳ್ಳುವ ಹೊಣೆ ತಮ್ಮಗಳ ಮೇಲಿದೆ. ಪ್ರತಿ ಪೊಲೀಸರಿಗೆ ವಾರ್ಷಿಕ 1000 ರೂ.ವೆಚ್ಚದಲ್ಲಿ ಇಲಾಖೆಯಿಂದ ಸಿಬ್ಬಂದಿಗೆ ಆರೋಗ್ಯ ಪರೀಕ್ಷೆ ಮಾಡಿಸಿದರೂ ಕೂಡ,ಇನ್ನು ಹೆಚ್ಚಿನ ಅಗತ್ಯ ಆರೋಗ್ಯ ಪರೀಕ್ಷೆಗಳನ್ನು ಖುದ್ದು ಆಸಕ್ತಿ ವಹಿಸಿ ಮಾಡಿಸಿಕೊಳ್ಳ ಬೇಕು.
ಪ್ರತಿ ಠಾಣಾ ಆವರಣದಲ್ಲಿ ವಾಲಿಬಾಲ್,ಬ್ಯಾಡ್ಮಿಂಟನ್, ಕಬಡ್ಡಿ ಇತ್ಯಾದಿ ಕೋರ್ಟ್‌ಗಳನ್ನು ಸ್ಥಾಪಿಸಿ,ಆಟೋಟಗಳಿಗೆ ಒಂದಿಷ್ಟು ಮ ಯ ಮೀಸಲಿಡಬೇಕು. ವಾರಕ್ಕೆ ಒಮ್ಮೆಯಾದರೂ ಟ್ರಕ್ಕಿಂಗ್‌ನಂಥ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳ ಬೇಕೆಂದು ಅಧಿಕಾರಿ, ಸಿಬ್ಬಂದಿಗೆ ಸೂ ಚಿಸಿದರು. ಯೋಗಾಸನಗಳನ್ನು ಹೇಳಿಕೊಟ್ಟಿದ್ದಾರೆ,ಆದರೆ ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಎಚ್ಚರಿಸಿದರು.
ಹಾರ್ಟ್‌ಸೆಂಟರ್ ಮುಖ್ಯಹೃದ್ರೋಗ ತಜ್ಞ ಡಾ.ಆರ್.ಎಸ್.ಕಾರ್ತಿಕ್ ಮಾತನಾಡಿ,ಹೃದಯಾಘಾತದ ಲಕ್ಷಣಗಳನ್ನು ಯಾರೂ ನಿರ್ಲ ಕ್ಷಿಸಬಾರದು. ಈಚಿನ ದಿನಗಳಲ್ಲಿ ಯುವಜನರು ಹೃದ್ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಚಿತ್ರದುಗದಲ್ಲೇ 15 ವರ್ಷ ಬಾಲಕ ಹೃದಯಾಘಾತದಿಂದ ಅಸು ನೀಗಿದ್ದಾನೆ. ಯುವಜನರಲ್ಲಿ ಹೃದಯಘಾತದ ಸಂಭವಿಸಿದರೆ ಜೀವಾಪಾಯ ಅಧಿಕವಿರುತ್ತದೆ. ಆದ್ದರಿಂದ ಪೂರಕ ಪರೀಕ್ಷೆಗಳನ್ನು ಕಾಲ,ಕಾಲಕ್ಕೆ ಮಾಡಿಸಿಕೊಳ್ಳ ಬೇಕು.
ಪೊಲೀಸರು,ವೈದ್ಯರು ಸೇವೆ ಸಮಾಜಕ್ಕೆ ಅತ್ಯಂತ ಪ್ರಮುಖವಾಗಿದೆ. ಉತ್ತಮ ಸೇವೆ ಸಲ್ಲಿಸಲು ಆರೋಗ್ಯವೂ ಚೆನ್ನಾಗಿರ ಬೇಕಾಗುತ್ತದೆ ಎಂದರು. ಹಾರ್ಟ್ ಸೆಂಟರ್ ಸಿಇಒ ರೂಪೇಶ್‌ಶೆಟ್ಟಿ ಮಾತನಾಡಿ,ಇಟಿಎಂ ಟೆಸ್ಟ್‌ಗೆ ಒಳಪಡುವ ಪೊಲೀಸರಿಗೆ ಶೇ.50 ರಿಯಾಯಿತಿ ನೀಡ ಲಾಗುವುದು ಎಂದರು.
ಯೋಗ ಗುರು ಡಾ.ಭಾಗೀರಥಿ ಕನ್ನಡಿತಿ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರು ನಗದು ಪುರಸ್ಕಾರವನ್ನು ಇಲಾ ಖೆಗೆ ಹಿಂತಿರುಗಿಸಿದರು. ಪೊಲೀಸರಿಗೆ ಆನ್‌ಲೈನ್ ಮೂಲಕ ಉಚಿತವಾಗಿ ಯೋಗಾಭ್ಯಾಸ ಹೇಳಿಕೊ ಡುವುದಾಗಿ ಭಾಗೀರಥಿ ಹೇಳಿದ ರು.
ಡಿಎಆರ್ ಡಿವೈಎಸ್‌ಪಿ ಗಣೇಶ್ ಸ್ವಾಗತಿಸಿ,ಡಿವೈಎಸ್‌ಪಿ ಪಿ.ಕೆ.ದಿನಕರ್ ವಂದಿಸಿದರು. ಎಎಸ್‌ಪಿ ಎಸ್.ಜೆ. ಸೋಮಶೇಖರ್, ಪಿಐ ಗಳಾದ ತಿಪ್ಪೇಸ್ವಾಮಿ,ನಯೀಂ ಅಹಮದ್ ಮತ್ತಿತರ ಪೊಲೀಸ್ ಅಧಿಕಾರಿ,ಸಿಬ್ಬಂದಿ,ಹಾರ್ಟ್‌ಸೆಂಡರ್ ವೈದ್ಯರು,ಶುಶ್ರೂಷಕರು ಇದ್ದರು.