

ಯಾದಗಿರಿ: ಅಶುದ್ಧ ಕೈಗಳಿಂದ ಊಟ ಮಾಡುವ ಮೂಲಕ ರೋಗ ತರುವ ಸೂಕ್ಷ್ಮಾಣು ಜೀವಿಗಳು ನಮ್ಮ ದೇಹದೊಳಗೆ ನೇರವಾಗಿ ಪ್ರವೇಶ ಮಾಡಿ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವದರಿಂದ ನಮ್ಮ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಎಂದು ಸ್ವಚ್ಛ ಭಾರತ ಮಿಷನ್ ಜಿಲ್ಲಾ ಐಇಸಿ ಸಮಾಲೋಚಕ ಶಿವಕುಮಾರ ಬಿ., ಕಿವಿಮಾತು ಹೇಳಿದರು.
ವಿಶ್ವ ಕೈ ತೊಳೆಯುವ ದಿನದ ನಿಮಿತ್ತ ಸೋಮವಾರ ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದ ಹಸಿರು ಸರೋವರದ ದಡದಲ್ಲಿ ಹಮ್ಮಿಕೊಂಡ ಸ್ವಚ್ಛತೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ನರೇಗಾ ಯೋಜನೆಯಲ್ಲಿ ಪ್ರಗತಿಯಲ್ಲಿದ್ದ ನಾಲಾ ಹೂಳೆತ್ತುವ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾಮರ್ಿಕರಿಗೆ ನಿಧರ್ಿಷ್ಠ ವಿಧಾನಗಳ ಮೂಲಕ ಕೈಗಳನ್ನು ಶುಚಿಯಾಗಿ ತೊಳೆಯುವ ಅಭ್ಯಾಸವನ್ನು ರೂಡಿಸಿಕೊಂಡು ಪ್ರತಿನಿತ್ಯ ಅನುಸರಿಸಬೇಕು ಎಂದರು.
ಇಂಥ ವಿಧಾನದಿಂದ ಶೇ.30 ರಷ್ಟು ಭೇದಿ, ಅತಿಸಾರದಂತ ಕಾಯಿಲೆ, ಶೇ.20 ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಕಡಿಮೆ ಮಾಡಬಹುದು. ಪ್ರತಿಯೊಬ್ಬರು ಪ್ರತಿದಿನ ನಿತ್ಯಕರ್ಮದ ಬಳಿಕ, ಊಟ ಮಾಡುವ ಮೊದಲು, ಇತರೆ ಕೆಲಸ ಮಾಡಿದ ನಂತರ ನಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಶುದ್ಧವಾದ ನಮ್ಮ ಕೈಗಳು ಮೂಗು, ಬಾಯಿಗೆ ಸ್ಪರ್ಶದಿಂದ ನೇರವಾಗಿ ನಮ್ಮ ದೇಹದೋಳಗೆ ಸೋಕ್ಷ್ಮಾಣು, ವೈರಾಣುಗಳು ದೇಹ ಪ್ರವೇಶ ಮಾಡಲ್ಲ ಎಂದು ಹೇಳಿದರು.