

ರಾವಂದೂರು: ಕುಟುಂಬದ ನಿರ್ವಹಣೆಯ ಜತೆಗೆ ಉತ್ತಮ ಆರೋಗ್ಯದ ಕಡೆಗೆ ನಾವು ಹೆಚ್ಚಿನ ಕಾಳಜಿ ವಹಿಸಿದಾಗ ಮಾತ್ರ ನಾವು ರೋಗಗಳಿಂದ ಮುಕ್ತವಾಗಬಹುದಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದಲ್ಲಿ ಎಂಎಂಕೆ ಫೌಂಡೇಷನ್ ಮತ್ತು ಬ್ಯಾಂಕ್ ಆಫ್ ಬರೋಡಾ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಜನರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಕೃಷಿ ಕಡೆಗೆ ಹೆಚ್ಚು ಗಮನ ಹರಿಸುತ್ತಿರುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಕೆಲವರು ಚಿಕಿತ್ಸೆ ಪಡೆಯದೆ ಮನೆಯಲ್ಲಿಯೇ ಇರುತ್ತಾರೆ. ಅಂತಹವರಿಗೆ ಆರೋಗ್ಯ ಶಿಬಿರಗಳು ಸಹಕಾರಿ ಎಂದರು.
ಎಂಎಂಕೆ ಫೌಂಡೇಷನ್‌ನ ವ್ಯವಸ್ಥಾಪಕ ಮಹದೇವ್ ಮಾತನಾಡಿ, ಸಂಘ-ಸಂಸ್ಥೆಗಳು ಮತ್ತು ಬ್ಯಾಂಕ್‌ಗಳು ಕೇವಲ ವ್ಯಾವಹಾರಿಕವಾಗಿ ಹೆಚ್ಚು ತ್ತು ನೀಡದೆ ಗ್ರಾಮೀಣ ಜನರ ಆರೋಗ್ಯದ ಕಡೆ ಗಮನಹರಿಸಬೇಕು ಎಂದು ತಿಳಿಸಿದರು.
ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯ ನುರಿತ ವೈದ್ಯರಿಂದ 500ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಲಾಯಿತು. ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಪ್ರಸಾದ್‌ಚಣಾಲ್, ರಾಜಶೇಖರ್, ಮೋಹನ್, ನರೇಂದ್ರ, ಲಕ್ಷ್ಮಣ್, ಅಭಿಷೇಕ್ ಇತರರಿದ್ದರು.