ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿ: ಅಮತೂರಿನಲ್ಲಿ ಆರೋಗ್ಯ ಮೇಳ ಉದ್ಘಾಟನೆ

5 kunigal ..
Published on

ಕುಣಿಗಲ್​ ವಿಜ್ಞಾನ, ತಂತ್ರಜ್ಞಾನ ಬೆಳೆದಂತೆ ಮಾನವನಿಗೆ ಆನೇಕ ಸಮಸ್ಯೆಗಳು ಎದುರಾಗುತ್ತಿವೆ, ಆರೋಗ್ಯ, ಶಿಣ ಹಾಗೂ ಜೀವನ ಶೆಲಿ ಬದಲಾಗುತ್ತಿದೆ, ಈ ನಿಟ್ಟಿನಲ್ಲಿ ದೇಶದ ಅಭಿವದ್ಧಿಗೆ ಪೂರಕವಾಗಿರುವ ಶಿಣ ಹಾಗೂ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಂಸದ ಡಿ.ಕೆ.ಸುರೇಶ್​ ಹೇಳಿದರು.

ತಾಲೂಕಿನ ಅಮತೂರಿನಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಆರೋಗ್ಯ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಬಹತ್​ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಹಾಗೂ ಶಿಣ ಅತಿ ಮುಖ್ಯವಾಗಿದ್ದು, ಇವೆರಡು ಇಂದು ದುಬಾರಿಯಾಗಿವೆ. ಆರೋಗ್ಯ ಸೇವೆ ಗಗನಕ್ಕೇರಿದ್ದು, ಶಿಣ ಬಡವರ ಕೆಗೆ ಎಟುಕದಂತಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತಾಲೂಕು ಮಟ್ಟದಲ್ಲಿ ಆರೋಗ್ಯ ಮೇಳ ಹಮ್ಮಿಕೊಂಡು ಬಡವರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಮುಂದಾಗಿದೆ ಎಂದು ಹೇಳಿದರು.

ಆರೋಗ್ಯ ೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಹದಯವನ್ನು ಕಸಿ ಮಾಡಲಾಗುತ್ತಿದೆ, ಕಿಡ್ನಿ ತೆಗೆದು ಬೇರೆ ಕಿಡ್ನಿ ಜೋಡಣೆ ಮಾಡಲಾಗುತ್ತದೆ. ಹಾಗಾಗಿ ದೇಹದಲ್ಲಿ ಯಾವುದೇ ರೀತಿ ಸಮಸ್ಯೆ ಕಾಣಿಸಿಕೊಂಡರೆ ರ್ನಿಲ್ಯ ಮಾಡದೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.

ಆಶಾ ಕಾರ್ಯಕರ್ತೆಯರಿಗೆ ನೆರವು: ಆರೋಗ್ಯ ೇತ್ರದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಅನನ್ಯವಾಗಿದೆ. ಆದರೆ ಅವರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ, ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬರಲಿದ್ದು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.

ಶಾಸಕ ಡಾ.ಎಚ್​.ಡಿ.ರಂಗನಾಥ್​ ಮಾತನಾಡಿ, ತಾಲೂಕಿನಲ್ಲಿ ವೆದ್ಯರ ಕೊರತೆ ಹಾಗೂ ಆಸ್ಪತ್ರೆ ಮೂಲಸೌಕರ್ಯ ಸಮಸ್ಯೆ ಸಾಕಷ್ಟಿದೆ. ಗ್ರಾಮೀಣ ಜನರಿಗೆ ಸಮರ್ಪಕ ಆರೋಗ್ಯ ಸೌಲಭ್ಯ ದೊರಕುತ್ತಿಲ್ಲ, ಈ ನಿಟ್ಟಿನಲ್ಲಿ ಈಗಾಗಲೇ ತಾಲೂಕಿನ ವಿವಿಧ ಭಾಗಗಳಲ್ಲಿ 85ಕ್ಕೂ ಹೆಚ್ಚು ಆರೋಗ್ಯ ಶಿಬಿರ ಏರ್ಪಡಿಸಿ ಆ ಮೂಲಕ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಿಕೊಡಲಾಗುತ್ತಿದೆ ಎಂದರು.

ಮಧುಮೇಹ ಹಾಗೂ ರಕ್ತದೋತ್ತಡದಿಂದ ಬಳಲುತ್ತಿರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರಕಿಸಿಕೊಡುವ ದಿಸೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮೊಬೆಲ್​ ಕ್ಲಿನಿಕ್​ ಪ್ರಾರಂಭಿಸಲು ಉದ್ದೇಶಿಸಲಾಗಿದೆ, ತಾಲೂಕಿನಲ್ಲಿ 250 ಎಚ್​ಐವಿ ರೋಗಿಗಳು 90 ಜನ ಯ ರೋಗದಿಂದ ಬಳಲುತ್ತಿದ್ದಾರೆ. ಜನರು ಮೂಢನಂಬಿಕೆ ಕಂದಾಚಾರಗಳಿಗೆ ಒಳಗಾಗದೆ ಪ್ರತಿಯೊಬ್ಬ ರೋಗಿಗಳು ವೆದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿದರು.

ತಹಸೀಲ್ದಾರ್​ ಮಹಬಲೇಶ್ವರ, ತಾಪಂ ಇಒ ಜೋಸ್​ೆ, ಟಿಎಚ್​ಒ ಡಾ.ಜಗದೀಶ್​, ಪುರಸಭೆ ಅಧ್ಯ ರಂಗಸ್ವಾಮಿ, ಗ್ರಾಪಂ ಅಧ್ಯ ಯಶೋದಾ, ಪುಷ್ಪಲತಾ, ಲವಕುಮಾರ್​, ಸದಸ್ಯರಾದ ಹರೀಶ್​, ಲೀಲಾವತಿ, ಭರತ್​, ಶ್ರೀನಿವಾಸ್​ ಇದ್ದರು.

ಪ್ರಕರಣ ದಾಖಲಿಸಿ: ಆಯುಷ್ಮಾನ್​ ಭಾರತ್​ ಯೋಜನೆಯಡಿ ಕಾರ್ಡ್​ ಹೊಂದಿರುವ ಬಡವರಿಗೆ ಉತ್ತಮ ಹಾಗೂ ಅಗ್ಗದ ದರದಲ್ಲಿ ಚಿಕಿತ್ಸೆ ಕಲ್ಪಿಸಲು ಹಲವು ಖಾಸಗಿ ಆಸ್ಪತ್ರೆಯೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡು ರೋಗಿಗಳಿಗೆ ವಾರ್ಷಿಕ 5 ಲ ರೂ.ಗಳವರೆಗೆ ಖರ್ಚು ಮಾಡುತ್ತಿದೆ. ಆದರೆ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ದುಪ್ಪಟ್ಟು ಹಣ ಪಡೆದರೆ ಅಂತಹ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸುವಂತೆ ಸಂಸದ ಡಿ.ಕೆ.ಸುರೇಶ್​ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net