

ತುಮಕೂರು: ಭಾರತೀಯರ ಜೀವನ ಕ್ರಮದಲ್ಲಿ ಆಯುರ್ವೇದ ಬಹಳ ಮಹತ್ವ ಪಡೆದುಕೊಂಡಿದ್ದು, ಬ್ರಿಟಿಷರ ಕಾಲದಲ್ಲಿ ಆಯುರ್ವೇದಕ್ಕೆ ಮಾನ್ಯತೆ ಸಿಗಲಿಲ್ಲ ಎಂದು ಭುವಿ ಆಯುವೇದ ಆಸ್ಪತ್ರೆಯ ಡಾ.ಶಿಲ್ಪಪ್ರಸನ್ನ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗ ಹಾಗೂ ಭುವಿ ಆಯುರ್ವೇದ ಆಸ್ಪತ್ರೆ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಅರ್ಥ-ಆರೋಗ್ಯ-ಆಯುರ್ವೇದ’ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಮತ್ತೆ ತನ್ನ ಹಿಂದಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಕರೊನಾ ವೈರಸ್ ಬಗ್ಗೆ ಹಿಂದೆಯೇ ಆಯುರ್ವೇದದಲ್ಲಿ ಉಲ್ಲೇಖವಿತ್ತೆಂದು ತಿಳಿಸಿರುತ್ತಾರೆ ಹಾಗೂ ನಮ್ಮ ಆರೋಗ್ಯ ಸುಸ್ಥಿತಿಯಲ್ಲಿರ ಬೇಕಾದರೆ ಹಿತ-ಮಿತ ಆಹಾರ ವ್ಯಾಯಾಮ ಅಗತ್ಯ ಎಂದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಿ.ಎನ್.ಅಶ್ವಿನಿ ಮಾತನಾಡಿ, ಯುಜಿಸಿ ನಿಯಮಾವಳಿ ಅಡಿಯಲ್ಲಿ ಭುವಿ ಆಯುರ್ವೇದ ಆಸ್ಪತ್ರೆ ಜತೆ ಎಂಒಯು ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಕಾಲೇಜಿನ ಮಕ್ಕಳಿಗೆ ಆರೋಗ್ಯ ಕುರಿತು ಮಾಹಿತಿ
ಲಭ್ಯವಾಗಲಿದೆ ಎಂದರು.
ಪ್ರಾಚಾರ್ಯೆ ಡಾ.ಟಿ.ಆರ್.ಲೀಲಾವತಿ ಮಾತನಾಡಿ, ಕರೋನಾ ಸನ್ನಿವೇಶದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಆಯುರ್ವೇದ ಆಸ್ಪತ್ರೆ ಜತೆಗಿನ ಒಪ್ಪಂದ ಸಹಾಯಕವಾಗಬಹುದು ಎಂದರು. ಪಾಲಿಕೆ ಸದಸ್ಯ ಗಿರಿಜಾ, ಕಾಲೇಜಿನ ಸ್ಥಳೀಯ ಘಟಕದ ಕಾರ್ಯದರ್ಶಿ ಪ್ರೊ.ಸಿದ್ದಪ್ಪ, ಐಕ್ಯೂಎಸಿ ಸಂಚಾಲಕ ಆರ್.ಶ್ರೀಧರ್, ನ್ಯಾಕ್ ಕಮಿಟಿ ಸಂಚಾಲಕಿ ಮಧುಶಾಲಿನಿ, ಐಟಿ ಸಂಚಾಲಕಿ
ಸಿ.ಲೀಲಾವತಿ ಮತ್ತಿತರರು ಇದ್ದರು.