ಆರೋಗ್ಯಕ್ಕೆ ದಂತಗಳ ರಕ್ಷಣೆಯೂ ಮುಖ್ಯ

11
Published on

ಮೈಸೂರು: ಆರೋಗ್ಯ ಕಾಪಾಡಿಕೊಳ್ಳುವುದರಲ್ಲಿ ದಂತಗಳ ರಕ್ಷಣೆಯೂ ಮುಖ್ಯವಾಗಿದ್ದು, ಅದಕ್ಕೆ ಗಮನ ನೀಡಬೇಕು ಎಂದು ರೋಟರಿ ಪಶ್ಚಿಮ ಸಂಸ್ಥೆ ಅಧ್ಯಕ್ಷ ಉಲ್ಲಾಸ್ ಪಂಡಿತ್ ಹೇಳಿದರು.
ನಗರದ ಕೇಂದ್ರ ಕಾರಾಗೃಹದಲ್ಲಿ ಬಂಧಿಗಳ ಉಪಯೋಗಕ್ಕಾಗಿ ಪಶ್ಚಿಮ ವಲಯ ರೋಟರಿ ಸಂಸ್ಥೆ, ಜೆಎಸ್‌ಎಸ್, ಕೇಂದ್ರ ಕಾರಾಗೃಹದಿಂದ ಇತ್ತೀಚೆಗೆ ಆರಂಭಿಸಲಾದ ದಂತ ಚಿಕಿತ್ಸಾ ಕ್ಲಿನಿಕ್ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ದಂತಗಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಬಂಧಿಗಳ ದಂತ ಆರೋಗ್ಯಕ್ಕಾಗಿ ಈ ಕ್ಲಿನಿಕ್‌ನ ಉಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯಶ್ರೀ ಮಾತನಾಡಿ, ರೋಟರಿ ಸಂಸ್ಥೆಯಿಂದ ಬಂಧಿಗಳಿಗಾಗಿ ಡೆಂಟಲ್ ಕ್ಲಿನಿಕ್ ಉಪಕರಣ ನೀಡಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಬಳಸಿಕೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ವಿಜಯ್ ಎಸ್. ರೋಡಕರ್, ರೋಟರಿ ಕ್ಲಬ್‌ನ ಕಮ್ಯುನಿಟಿ ಅಧ್ಯಕ್ಷೆ ಡಾ.ಸೋನಿಯಾ ಮಂದಪ್ಪ, ಜೆಎಸ್‌ಎಸ್ ದಂತ ಕಾಲೇಜಿನ ಡಾ.ಚಂದ್ರಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net