ಆರೋಗ್ಯಕ್ಕೆ ಆಯುರ್ವೇದ ಔಷಧ ಸಹಕಾರಿ

7
Published on

ಮೈಸೂರು: ಉತ್ತಮ ಆರೋಗ್ಯಕ್ಕಾಗಿ ಆಯುರ್ವೇದ ಔಷಧವು ಹೆಚ್ಚು ಸಹಕಾರಿಯಾಗಿದೆ. ಉತ್ತಮ ಗಿಡಮೂಲಿಕೆಗಳಿಂದ ತಯಾರಾದ ಔಷಧ ಬಳಸಿದಾಗ ಆರೊಗ್ಯ ವೃದ್ಧಿಯಾಗುತ್ತದೆ ಎಂದು ಆಯುರ್ವೇದ ವೈದ್ಯೆ ಡಾ. ಕವಿತಾಪ್ರಸಾದ್ ಹೇಳಿದರು.
ಲಯನ್ಸ್ ಕ್ಲಬ್ ಆಫ್ ಮೈಸೂರು ಅಂಬಾಸಿಡರ್ ಸಂಸ್ಥೆಯಿಂದ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಏಳನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಸದಸ್ಯರಿಗೆ ಆಯುರ್ವೇದ ಕುರಿತು ತಿಳಿವಳಿಕೆ ನೀಡಿದರು.
ಆರೊಗ್ಯ ವೃದ್ಧಿಯಾದರೆ ಮನಸ್ಸಿನಲ್ಲಿ ವಿಶಾಲತೆ ಸಂತೋಷ ಬರುತ್ತದೆ. ತಮ್ಮ ಮನೆಗಳಲ್ಲಿ, ಉದ್ಯಾನದಲ್ಲಿ, ಜಮೀನುಗಳಲ್ಲಿ ಆಯುರ್ವೇದ ಸಂಬಂಧಿತ ಗಿಡಗಳನ್ನು ಬೆಳೆಸುವ ಮೂಲಕ ಆಯುರ್ವೇದ ಸಮಾಜ ನಿರ್ಮಾಣ ಮಾಡಬಹುದು. ಆಯುರ್ವೇದವನ್ನು ಜೀವನದಲ್ಲಿ ಅಳವಡಿಸಿಕೊಂಡು ಎಷ್ಟು ರೋಗಗಳನ್ನು ತಡೆಗಟ್ಟಬಹುದು ಎಂದು ಸಲಹೆ ನೀಡಿದರು.
ಸಂಸ್ಥೆಯ ಹೊಸ ಸದಸ್ಯರ ಸೇರ್ಪಡೆ ಬಳಿಕ ಲಯನ್ಸ್ ಸಂಸ್ಥೆಯ ಡಾ.ಆರ್.ಡಿ ಕುಮಾರ್ ಮಾತನಾಡಿ, ಪ್ರಪಂಚದಲ್ಲಿ ಬಲಿಷ್ಠವಾದ ಸೇವಾ ಮನೋಭಾವ ಹೊಂದಿರುವ ಲಯನ್ಸ್ ಸಂಸ್ಥೆಯು ಸಮಾಜದಲ್ಲಿ ಅವಕಾಶ ವಂಚಿತರಿಗೆ ಸಹಾಯ ಮಾಡುವ ಮೂಲಕ ಅಂಥವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಸಮಾಜಮುಖಿ ಕೆಲಸವನ್ನು ಮಾಡುತ್ತಿದೆ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಮಕಾಳಾ ಶಿವಕುಮಾರ್, ಕಾರ್ಯದರ್ಶಿ ಟಿ.ಎಚ್.ವೆಂಕಟೇಶ್, ಖಜಾಂಚಿ ಮಹದೇವಪ್ರಸಾದ್, ಸದಸ್ಯರಾದ ಜಯಪ್ರಕಾಶ್, ಎಚ್.ಕೆ. ಪ್ರಸನ್ನ , ಸಿ ಆರ್.ದಿನೇಶ್, ಅರುಣ್, ಶರೀಫ್, ಖಾನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net