ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತಿಲ್ಲ

Rotary
Published on

ಚಿತ್ರದುರ್ಗ: ಎಲ್ಲರೂ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಅದಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ ಎಂದು ಸ್ತ್ರೀ ರೋಗ ತಜ್ಞೆ ಡಾ.ಚೈತ್ರಾ ರವಿ ಸಲಹೆ ನೀಡಿದರು.

ಎಸ್‌ಆರ್‌ಬಿಎಂಎಸ್ ರೋಟರಿ ಬಾಲಭವನದಲ್ಲಿ ರೋಟರಿ ಕ್ಲಬ್ ಚಿತ್ರದುರ್ಗ, ಬಸಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಭಾನುವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತದೊತ್ತಡ, ಮಧುಮೇಹ ಸಾಮಾನ್ಯವಾಗಿದೆ. ಇದಕ್ಕೆ ಒತ್ತಡದ ಜೀವನಶೈಲಿ ಕಾರಣ. ಆರೋಗ್ಯದ ಕುರಿತು ಯಾರು ನಿರ್ಲಕ್ಷೆ ವಹಿಸಬೇಡಿ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಎಂದರು.

ಕ್ಲಬ್‌ನ ಎಸ್.ವೀರೇಶ್ ಮಾತನಾಡಿ, ನಮ್ಮ ಕ್ಲಬ್ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದು, ಉಚಿತ ಆರೋಗ್ಯ ತಪಾಸಣೆಯೂ ಒಂದು ಎಂದು ತಿಳಿಸಿದರು.

ಡಾ.ರವಿ, ರೋಟರಿ ಕ್ಲಬ್‌ನ ಅಧ್ಯಕ್ಷ ಕನಕರಾಜ್, ಕಾರ್ಯದರ್ಶಿ ವಿಕ್ರಾಂತ್ ಜೈನ್, ಎಚ್.ರಂಗಾರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net