ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ

BK3
ಬಸವಕಲ್ಯಾಣದ ಅರಿವು ಆಚಾರ ಅನುಭವ ಕೇಂದ್ರದಲ್ಲಿ ಲಿಂ. ಡಾ. ಮಹಾಂತ ಸ್ವಾಮೀಜಿ ಅವರ 94ನೇ ಜಯಂತ್ಯುತ್ಸವ ಮತ್ತು ವ್ಯಸನ ಮುಕ್ತ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಘವೇಂದ್ರ ಎಸ್.ಚನ್ನಬಸಪ್ಪ ಉದ್ಘಾಟಿಸಿದರು. ನ್ಯಾಯಾಧೀಶ ಬಿ.ಚೆನ್ನಪ್ಪ, ನಿವೃತ್ತ ನ್ಯಾಯಾಧೀಶ ಎಸ್‌ಎಸ್.ನಾಗರಾಳೆ, ವೈದ್ಯ ಬಸವರಾಜ ಪಂಡಿತ ಇತರರಿದ್ದರು.
Published on

ಬಸವಕಲ್ಯಾಣ: ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಯಾವುದೇ ಚಟಗಳಿಗೆ ಯುವಕರು ಆಕರ್ಷಿತರಾಗದೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಬೇಕು ಎಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಘವೇಂದ್ರ ಎಸ್.ಚನ್ನಬಸಪ್ಪ ಹೇಳಿದರು.

ನಗರದ ಅರಿವು ಆಚಾರ ಅನುಭವ ಕೇಂದ್ರದಲ್ಲಿ ಸೋಮವಾರ ಲಿಂ.ಡಾ. ಗುರುಮಹಾಂತ ಸ್ವಾಮೀಜಿ ಅವರ 94ನೇ ಜಯಂತ್ಯುತ್ಸವ ಹಾಗೂ ವ್ಯಸನ ಮುಕ್ತ ದಿನಾಚರಣೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರಿಗೂ ಕಾನೂನಿನ ಅರಿವು ಅವಶ್ಯಕ. ಮತ್ತೊಬ್ಬರಿಗೆ ಸಮಸ್ಯೆಯಾಗದಂತೆ ಪ್ರತಿಯೊಬ್ಬರೂ ಬದುಕಬೇಕಿದೆ ಎಂದರು.

ಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ ಚೆನ್ನಪ್ಪ, ಕಾನೂನಿನ ಬಗ್ಗೆ ಪ್ರತಿಯೊಬ್ಬರೂತಿಳಿದುಕೊಳ್ಳಬೇಕು. ಅಪರಾಧ ಮುಕ್ತ ಮತ್ತು ವ್ಯಸನ ಮುಕ್ತವಾದ ಸಮಾಜ ಮಾಡುವಲ್ಲಿ ಎಲ್ಲರ ಪಾತ್ರ ಮಹತ್ವದ್ದಾಗಿದೆ ಎಂದರು.
ವೈದ್ಯ ಬಸವರಾಜ ಪಂಡಿತ ಸಮ್ಮುಖ ವಹಿಸಿದ್ದರು. ಮುಖ್ಯಗುರು ಮಹಾದೇವಿ ಬೀಡೆ, ಪ್ರಮುಖರಾದ ಹಣಮಂತ ಧನಶೆಟ್ಟಿ, ಚೆನ್ನವೀರ ಜಮಾದಾರ, ಶ್ರೀಶೈಲ ಹುಡೇದ, ಪಾಂಡುರAಗ ಹಡಪದ, ದತ್ತು ಬಾಂದೇಕರ್ ಮಾತನಾಡಿದರು.

ಸಂಗಮೇಶ ತೊಗರಖೇಡ, ಪಂಡಿತ ನಾಗರಾಳೆ, ವಿವೇಕ ನಾಗರಾಳೆ, ಸಂಗಮ್ಮ ಹಲ್ಲೆ, ಅಂಬಿಕಾ ನಾಗರಾಳೆ, ರಂಜನಾ ಬುಶೆಟ್ಟೆ, ವಿಜಯಲಕ್ಷಿö್ಮÃ ಹೂಗಾರ ಇದ್ದರು.

ಗುರುಪ್ರಸಾದ ಪಂಡಿತ ಸ್ವಾಗತಿಸಿದರು. ಭೀಮಾಶಂಕರ ಮಾಶಾಳಕರ ವಂದಿಸಿದರು. ಸುಹಾಸಿನಿ ಬಿರಾದಾರ ನಿರೂಪಣೆ ಮಾಡಿದರು. ಸುಮಿತ್ರ ದಾವಣಗಾಂವೆ ಪ್ರಾರ್ಥನಾ ಗೀತೆ ಹಾಡಿದರು. ಅದ್ವಿಕಾ ಪ್ರಹ್ಲಾದರಾವ ಮತ್ತು ಆಕಾಶ ಮೊಳಕೇರಾ ವಚನ ಗಾಯನ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net