

ಚಿಂಚೋಳಿ: `ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ' ಎಂಬ ವಾಣಿಯಂತೆ ಪ್ರತಿ ಹೆಣ್ಣು ಮಗು ಗುಣಟ್ಟದ ಶಿಕ್ಷಣ ಪಡೆಯಬೇಕು. ಅಲ್ಲದೆ ಆರೋಗ್ಯ ಸಂರಕ್ಷಣೆ, ಸ್ವಚ್ಛತೆಯತ್ತ ಗಮನಹರಿಸಬೇಕು ಎಂದು ಸುಲೇಪೇಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕಿ ಗುರುಬಸಮ್ಮ ಸಲಹೆ ನೀಡಿದರು.
ಸುಲೇಪೇಟ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟಿçÃಯ ಕಿಶೋರ ಸ್ವಾಸ್ಥÈ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಣ್ಣು ಮಕ್ಕಳ ಬೆಳವಣಿಗೆಯಲ್ಲಿ ಬದಲಾವಣೆ ಸಹಜ ಪ್ರಕ್ರಿಯೆ. ಯಾರು ಹೆದರಬೇಕಿಲ್ಲ, ನಿಮ್ಮ ಸಮಸ್ಯೆಗಳನ್ನು ಆರೋಗ್ಯ ಸಮಾಲೋಚಕರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ ಎಂದು ಹೇಳಿದರು.
200ಕ್ಕೂ ಹೆಚ್ಚು ಮಕ್ಕಳು ಜಾಗೃತಿ ಕರಪತ್ರ ಪ್ರದರ್ಶಿಸಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು. ಮುಖ್ಯಗುರು ಸುರೇಶ ವಾಲಿಕಾರ, ಶಿಕ್ಷಕರಾದ ಪ್ರೇಮನಾಥ ಬಿರಾದಾರ, ಪ್ರಭು ಜಾಣ, ವೇದಕುಮಾರ ಶಾಸ್ತಿç, ವಿಠ್ಠಲ್, ಶಿವಪ್ರಸಾದ, ಸುನೀತಾ ಕಲ್ಲೂರ, ಬಸವರಾಜೇಶ್ವರಿ, ಸಿ.ಪಟೇಲ್, ಭುವನೇಶ್ವರಿ, ಭಾಗ್ಯಶ್ರೀ ಇತರರಿದ್ದರು.