ಆರೋಗ್ಯ ಶಿಬಿರದಲ್ಲಿ 90ಕ್ಕೂ ಹೆಚ್ಚು ಜನರು ಭಾಗಿ

24.npk-02
Published on


ನಾಪೋಕ್ಲು: ನಾಪೋಕ್ಲು ಲಯನ್ಸ್ ಸಂಸ್ಥೆ, ಪೊನ್ನಾಡ್ ಉತ್ಪಾದಕರ ಸಂಘ, ಕೊಡವ ಸಮಾಜ, ಈಶ ಫೌಂಡೇಷನ್ ವತಿಯಿಂದ ಗುರುವಾರ ಕೊಡವ ಸಮಾಜದಲ್ಲಿ ಉಚಿತವಾಗಿ ಅರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಲಯನ್ಸ್ ಅಧ್ಯಕ್ಷ ಕನ್ನಂಬಿರ ಸುಧಿ ತಿಮ್ಮಯ್ಯ ಹಾಗೂ ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೆಟಿರ ಅಜಿತ್ ನಾಣಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈಶ ಫೌಂಡೇಷನ್ ಸಂಯೋಜಕ ಮಂಜುನಾಥ್ ಆರಾಧ್ಯ ಮಾತನಾಡಿದರು. ಶಿಬಿರದಲ್ಲಿ ವಿವಿಧ ಪರೀಕ್ಷೆಗಳನ್ನು ಮಾಡಲಾಯಿತು. 90ಕ್ಕೂ ಹೆಚ್ಚು ಜನರು ಪಾಳ್ಗೊಂಡಿದ್ದರು. ಮೂಳೆ ತಜ್ಙ ಡಾ.ಕಾರ್ತಿಕ್ ಅಯ್ಯಣ್ಣ, ಲಯನ್ಸ್ ಸೇವಾ ಕಾರ್ಯಕರ್ತರಾದ ಮುಕ್ಕಾಟಿರ ವಿನಯ್, ಕಾರ್ಯದರ್ಶಿ ಮಾದೆಯಂಡ ಕುಟ್ಟಪ್ಪ, ಕೋಟೆರ ಡಾ.ಪಂಚಮ್ ತಿಮ್ಮಯ್ಯ, ಕೇಟೋಳಿರ ರತ್ನಾ ಚರ್ಮಣ, ಬೊಪ್ಪೆರ ಜಯ, ಬಿದ್ದಪ್ಪ, ಪುಷ್ಪಾ ಸತೀಶ್, ವಿಶು ಪೂವಯ್ಯ, ಉಮೇಶ್, ಪೊನ್ನಾಡ್ ಉತ್ಪಾದಕರ ಸಂಘದ ಪೊನ್ನಪ್ಪ, ಕೃತಿಕಾ, ಪವಿತ್ರಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net