ಆರೋಗ್ಯ ಶಿಬಿರಗಳು ಸದುಪಯೋಗವಾಗಲಿ

12-08--krs1 (2)
Published on

ಕೆ.ಆರ್.ಸಾಗರ: ಕೆ.ಆರ್.ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀರಂಗಪಟ್ಟಣ ಲಯನ್ಸ್ ಕ್ಲಬ್, ಗ್ರಾಪಂ ಸಹಯೋಗದಲ್ಲಿ ವಾಕ್ ಮತ್ತು ಶ್ರವಣ ದೋಷ ಇರುವವರಿಗೆ ಶನಿವಾರ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು.


ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಈಸ್ಟ್ ಪ್ರಾಜೆಕ್ಟ್‌ನ ಡಾ.ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆಯ ತಜ್ಞ ವೈದ್ಯರು ತಪಾಸಣೆ ನಡೆಸಿದರು. ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ತಪಾಸಣೆ ಮಾಡಿಕೊಂಡರು.


ಲಯನ್ಸ್ ಕ್ಲಬ್‌ನ ಪ್ರಾಂತೀಯ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಶಿಬಿರದಲ್ಲಿ ಭಾಗವಹಿಸುವವರ ಉಚಿತ ಚಿಕಿತ್ಸೆಗೆ ಲಯನ್ಸ್ ಕ್ಲಬ್ ಸಹಾಯ ಮಾಡುತ್ತಿದ್ದು, ಬೆಂಗಳೂರಿನ ಡಾ.ಎಸ್.ಆರ್.ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ ಸಹಕಾರ ನೀಡುತ್ತಿದೆ. ಸಾರ್ವಜನಿಕರು ಇಂತಹ ಶಿಬಿರಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.


ಇದೇ ವೇಳೆ ತಪಾಸಣೆಗೆ ಆಗಮಿಸಿದ್ದ ವೈದ್ಯರನ್ನು ಶ್ರೀರಂಗಪಟ್ಟಣದ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಬಿ.ಕುಮಾರ್, ವಲಯ ಅಧ್ಯಕ್ಷ ಟಿ.ಶ್ರೀಧರ, ಕಾರ್ಯದರ್ಶಿ ಪುಟ್ಟರಾಮು, ಖಜಾಂಚಿ ಶೇಖರ್, ಕಾಲೇಜು ಪ್ರಾಂಶುಪಾಲ ಚಂದ್ರು, ಮುಖಂಡರಾದ ಜಗದೀಶ್, ಸಿದ್ದ ಮಾಸ್ಟರ್, ರಾಮಪ್ರಸಾದ ಪೊನ್ನಸ್ವಾಮಿ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net