

ಹುಲಸೂರು: ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಗೆ ಕ್ರೀಡೆ ಅವಶ್ಯವಾಗಿದ್ದು, ಆಸಕ್ತಿ ಅನುಸಾರ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.
ಪಟ್ಟಣದ ವಿದ್ಯಾ ಜ್ಯೋತಿ ಪ್ರೌಢಶಾಲೆ ಆವರಣದಲ್ಲಿ ಬುಧುವಾರ ಆಯೋಜಿಸಿದ್ದ ಹುಲಸೂರು ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಮಕ್ಕಳಿಗೆ ಪಾಠದ ಜತೆಗೆ ಆಟ ಮುಖ್ಯವಾಗಿದೆ . ದೇಸಿ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಸದೃಢ ಶರೀರಕ್ಕೆ ಕ್ರೀಡೆ ಪೂರಕವಾಗಿದೆ. ಕ್ರೀಡಾಕೂಟಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ತಹಸೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ, ಶಾಲೆಗಳಲ್ಲಿ ಶಿP್ಷÀಣಕ್ಕೆ ಹೆಚ್ಚು ಒತ್ತು ಕೊಡುವುದರ ಜತೆಗೆ ಕ್ರೀಡೆಗೂ ಸಹ ಸಮಯ ನೀಡಬೇಕು. ಹಿಂದೆ ಕ್ರೀಡೆಗಳನ್ನು ಮನರಂಜನೆಗಾಗಿ ಆಯೋಜಿಸಲಾಗುತ್ತಿತ್ತು. ಈಗ ಆರೋಗ್ಯಕ್ಕಾಗಿ ಕ್ರೀಡೆ ಮುಖ್ಯವಾಗಿದೆ ಎಂದು ಹೇಳಿದರು.
ದೈಹಿಕ ಶಿP್ಷÀಣಾಧಿಕಾರಿ ನಾಗನಾಥ ದುಬಲಗುಂಡೆ ಮಾತನಾಡಿದರು. ಈ ಕ್ರೀಡಾ ಕೂಟದಲ್ಲಿ ಹುಲಸೂರು ಮೀರಖಲ, ಬೇಲೂರು ಸೇರಿ 18 ಗ್ರಾಮದ ಶಾಲಾ ಮಕ್ಕಳು ಭಾಗವಹಿಸಿದ್ದರು. ಕಬಡ್ಡಿ, ಖೋಖೋ, ವಾಲಿಬಾಲï, ಥ್ರೋಬಾಲï,100 ಮೀಟರ್ ಓಟ ಸೇರಿ ವಿವಿಧ ಕ್ರೀಡೆಗಳು ಆಯೋಜಿಸಲಾಗಿತ್ತು.
ತಾಪಂ ಇಒ ವೈಜಣ್ಣ ಫುಲೆ, ಕ್ಷೇತ್ರ ಶಿP್ಷÀಣಾಧಿಕಾರಿ ಸಿದ್ದವಿರಯ್ಯ ರುದನೂರ, ಶಿವರಾಜ ಕನಕಟ್ಟೆ, ಮನೋಹರ ಕಂಠಿಕೋರೆ, ಪಿಎಸ್‌ಐ ಶಿವಪ್ಪ ಮೇಟಿ, ರಾಜಕುಮಾರ ನಂದೋಡೆ, ಭೀಮಶಂಕರ ಅದೆಪ್ಪ, ಡಾ.ಧರ್ಮೇಂದ್ರ ಬೋಸ್ಲೆ, ನಾಗರಾಜ ಹಾವಣ್ಣ, ಮಾರುತಿ ಬೇಂದ್ರೆ, ವೆಂಕಟ ಕಾರಬಾರಿ, ಶಂಕ್ರಯ್ಯ ಸ್ವಾಮಿ, ಶಿವರಾಜ ಪತಂಗೆ ಇತರರಿದ್ದರು.