ಆರೋಗ್ಯ ವಿಚಾರಿಸಿದ ಶಾಸಕ ಬೆಲ್ದಾಳೆ

beldale
Published on

ಬೀದರ್: ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಆರೋಗ್ಯವನ್ನು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ವಿಚಾರಿಸಿದರು.
ಬ್ರಿಮ್ಸ್ ಮತ್ತು ವಾಸು ಆಸ್ಪತ್ರೆಗೆ ತೆರಳಿ ರೋಗಿಗಳನ್ನು ಮಾತನಾಡಿಸಿ ಕುಟುಂಬ ಸದಸ್ಯರಲ್ಲಿ ಧೈರ್ಯ ತುಂಬಿದರು. ವೈದ್ಯರ ಜತೆ ಚರ್ಚೆ ನಡೆಸಿ ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಕಲುಷಿತ ನೀರು ಸೇವಿಸಿದ 25ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದು, ಮೂವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆಯ ಸಂಪೂರ್ಣ ಖರ್ಚು ಸರ್ಕಾರವೇ ಭರಿಸಬೇಕು ಎಂದರು. ಬ್ರಿಮ್ಸ್ ನಿರ್ದೇಶಕ ಶಿವಕುಮಾರ ಶೆಟಕಾರ್, ಡಿಎಚ್ಒ ಡಾ.ರತಿಕಾಂತ ಸ್ವಾಮಿ, ಡಿಎಸ್ ಮಹೇಶ ಪಾಟೀಲ್, ಡಾ.ವಿಜಯಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net