ಆರೋಗ್ಯ ಯೋಜನೆ ಲಾಭ ಪಡೆಯಿರಿ

Published on

ಹುಣಸಗಿ : ಸಾರ್ವಜನಿಕರ ಆರೋಗ್ಯದ ಸುರಕ್ಷತೆಗಾಗಿ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆಯ ಲಾಭವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಕಾಮನಟಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ದೇವರಮನಿ ಹೇಳಿದರು.
ಕಾಮನಟಗಿ ಗ್ರಾಪಂ ಕಚೇರಿಯಲ್ಲಿ ಆರೋಗ್ಯ ಇಲಾಖೆ ಮಂಗಳವಾರ ಹಮ್ಮಿಕೊಂಡ ಆಯುಷ್ಮಾನ್ ಭಾರತ ಅಭಿಯಾನ ಹಾಗೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಸೇವೆಗಳ ಲಾಭ ಪಡೆಯಬೇಕು. ಈ ಯೋಜನೆ ಸಾರ್ವಜನಿಕರ ಆರೋಗ್ಯ ಅಭಿಯಾನವಾಗಿದ್ದು, ಪ್ರತಿ ಗ್ರಾಮ ಮಟ್ಟದಲ್ಲೂ ಆರೋಗ್ಯ ಸೇವೆ ತಲುಪಿಸುವ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ ಎಂದರು.
ವೈದ್ಯಾಧಿಕಾರಿ ಮಹಾಂತೇಶ ಮಾತನಾಡಿ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿ ವಿವಿಧ ರೋಗಗಳ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುವುದು. ಗ್ರಾಮೀಣ ಭಾಗದ ಜನರು ಈ ಶಿಬಿರದ ಪ್ರಯೋಜನೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪಿಡಿಒ ಶರಣಗೌಡ ಉಳ್ಳೆಸೂರ, ನರಸಿಂಹರಾವ ಜಹಾಗೀರದಾರ್, ಬಸವರಾಜ ಹೊಸಮನಿ, ಬಸವಣ್ಣೆಪ್ಪ, ಜೆಟ್ಟೆಪ್ಪ ಹೊಂಬಳಕಲ್ಲ, ಕೃಷ್ಣ ಚವ್ಹಾಣ್, ಸೈದಪ್ಪ ಕಟ್ಟಿಮನಿ, ಶರಣು, ನಂದು ಮಾಳಿ, ಅಲ್ಲಿಸಾಬ್ ಅವರಾದಿ, ಹುಲಗಪ್ಪ, ಕರೆಪ್ಪ ಚೂರಿ, ಮುದೆಪ್ಪ ಕಲ್ಯಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net