ಆರೋಗ್ಯ ಮೇಳ-ರಕ್ತದಾನ ಶಿಬಿರ

2-GTL BLOOD
Published on

ಗುತ್ತಲ: ಸ್ಥಳೀಯ ಮುದಾಯ ಆರೋಗ್ಯ ಕೇಂದ್ರದಲ್ಲಿ ಅ.3ರಂದು ಬೆಳಗ್ಗೆ 10ಗಂಟೆಗೆ ಆಯುಷ್ಮಾನ್‌ಭವ ಕಾರ್ಯಕ್ರಮದಡಿ ವಿಶೇಷ ಆರೋಗ್ಯ ಮೇಳ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಕಾರ್ಯಕ್ರಮ ಉದ್ಘಾಟಿಸುವರು. ಆರೋಗ್ಯ ಮೇಳದಲ್ಲಿ ಡಾ. ಪ್ರಮೋದಗೌಡ ಪಾಟೀಲ, ಡಾ. ನವೀನ ಸಂಗೂರಮಠ, ಡಾ. ಸಂತೋಷ ನಾಯ್ಕ, ಡಾ. ಅಮೃತಾಂಶು ಕೆ., ಡಾ. ಶಂಭುಲಿಂಗ ಕಿಳ್ಳೆರ್, ಡಾ. ಕಿರಣ ಎಸ್.ಎಚ್., ಡಾ. ನವೀನ, ಡಾ. ದೀಪಕ ಕೋಣಕೇರಿ ಆರೋಗ್ಯ ತಪಾಸಣೆ ನಡೆಸುವರು. ಅತಿಥಿಗಳಾಗಿ ತಹಸೀಲ್ದಾರ್ ಶಂಕರ ಜಿ.ಎಸ್., ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರಭಾಕರ ಕುಂದೂರ, ಪಟ್ಟಣ ಪಂಚಾಯತಿ ಸದಸ್ಯರು ಭಾಗವಹಿಸುವರು ಎಂದು ಸಮುದಾಯ ಆರೋಗ್ಯ ಕೇಂದ್ರ ಆಡಳಿತಾಧಿಕಾರಿ ಡಾ. ಅಭಿನಂದನಕುಮಾರ ಸಾಹುಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net