

ಹಾಸನ: ಇತ್ತೀಚಿನ ದಿನಗಳಲ್ಲಿ ಮಕ್ಕಳು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಅವರಿಗೆ ಆರೋಗ್ಯ ಮತ್ತು ಸ್ವಚ್ಚತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಹೆಮ್ಮಿಗೆ ಮೋಹನ್ ಅಭಿಪ್ರಾಯಪಟ್ಟರು.
ತಾಲೂಕಿನ ದೊಡ್ಡಕೊಂಡಗೊಳ ಪ್ರೌಢಶಾಲೆಯಲ್ಲಿ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಹಾಸನ ಶಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ, ಆಮ್ಮ ಕಣ್ಣಿನ ಆಸ್ಪತ್ರೆ, ಭಾರತೀಯ ದಂತ ವೈದ್ಯರ ಸಂಘ, ಹಾಸನ, ಜೀವ ಸಂಜೀವಿನಿ ರಕ್ತ ನಿಧಿ ಕೇಂದ್ರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಮತ್ತು ಪೋಷಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಆರೋಗ್ಯ ರಕ್ಷಣೆಗಾಗಿ ರೆಡ್ ಕ್ರಾಸ್ ಸಂಸ್ಥೆಯು ಎಲ್ಲಾ ಪ್ರೌಢಶಾಲೆಗಳಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕಗಳನ್ನು ಪ್ರಾರಂಭಿಸಿ ಅದರ ಮೂಲಕ ಪ್ರತಿ ಶಾಲೆಗಳಲ್ಲಿ ಪ್ರಥಮ ಚಿಕಿತ್ಸೆ, ಆರೋಗ್ಯ ಶಿಬಿರ, ರಸ್ತೆ ಸುರಕ್ಷತೆ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆಯನ್ನು ರೂಪಿಸಿದೆ ಎಂದು ತಿಳಿಸಿದರು.
ಜೂನಿಯರ್ ರೆಡ್ ಕ್ರಾಸ್ ಘಟಕದ ಜಿಲ್ಲಾ ಮುಖ್ಯಸ್ಥ ಎಚ್.ಡಿ ಕುಮಾರ್ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಜೂನಿಯರ್ ರೆಡ್ ಕ್ರಾಸ್ ಘಟಕದ ಮೂಲ ಉದ್ದೇಶಗಳನ್ನು ವಿವರಿಸಿದರು. ಡಾ.ಮಂಜುನಾಥ್ ಮಕ್ಕಳ ಆರೋಗ್ಯ ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಯ ದಿನೇಶ್‌ವಹಿಸಿದ್ದರು. ಸಾಲಗಾಮೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಣೇಶ್,ಸಹ್ಯಾದ್ರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞರು ಮತ್ತು ರೆಡ್ ಕ್ರಾಸ್ ನಿರ್ದೇಶಕಿ ಡಾ. ಭಾರತಿ ರಾಜಶೇಖರ್, ಅಮ್ಮ ಕಣ್ಣಿನ ಆಸ್ಪತ್ರೆಯ ಡಾ. ಸಂದೀಪ್, ಡಾ. ಕವಿತಾ, ಡಾ.ಅಕ್ಕಮಹಾದೇವಿ, ಡಾ.ಸೀಮಾ ಮುರಳಿದರ್, ಡಾ.ರಮ್ಯಾ ಬಿ.ಎಂ ಹಾಗೂ ರೆಡ್ ಕ್ರಾಸ್ ಉಪಸಭಾಪತಿ ಡಾ. ವೈ.ಎಸ್ ವೀರಭದ್ರಪ್ಪ, ಕಾರ್ಯದಶಿ ಶಬ್ಬೀರ್ ಅಹಮದ್, ಖಜಾಂಚಿ ಜಯೇಂದ್ರಕುಮಾರ್, ನಿರ್ದೇಶಕರುಗಳಾದ ಎಸ್.ಎಸ್ ಪಾಷ, ಅಮ್ಜದ್ ಖಾನ್, ಸುಬ್ಬಸ್ವಾಮಿ ವೈ,ಎನ್, ಹರ್ಷಿತ್ ಎಚ್.ಆರ್, ಚಂದನ್ ಇತರರು ಇದ್ದರು.