ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಗೆ ಒತ್ತಾಯ

CTD RIAN TRUST
Published on

ಚಿತ್ರದುರ್ಗ: ಆಹಾರ ಸರಪಳಿಯಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ಸೇರ್ಪಡೆ ಆತಂಕದ ವಿಷಯವಾಗಿದ್ದು,ರಾಜ್ಯಸರ್ಕಾರ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸ ಬೇಕಿದೆ ಎಂದು ನಗರದ ರೈನ್‌ಟ್ರಸ್ಟ್ ಅಧ್ಯಕ್ಷ ಕಸವನಹಳ್ಳಿರಮೇಶ್ ಹೇಳಿದರು.
ಟ್ರಸ್ಟ್,ಮೆದೇಹಳ್ಳಿ ಶ್ರೀ ದೇವರಾಜು ಅರಸು ಗ್ರಾಮಾಂತರ ಪ್ರೌಢಶಾಲೆ ಹಾಗೂ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಶನಿವಾರ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಪ್ಲಾಸ್ಟಿಕ್‌ಮುಕ್ತ ಕರ್ನಾಟಕ ಅಭಿಯಾನದಲ್ಲಿ ಮಾತನಾಡಿದ ಅವರು,ಗಾಳಿ,ನೀ ರು,ಆಹಾರದ ಮೂಲಕ ಪ್ಲಾಸ್ಟಿಕ್ ಪ್ರಾಣಿ,ಮನುಷ್ಯರ ದೇಹ ಸೇರುತ್ತಿದ್ದು,ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಹೆಚ್ಚಾಗುತ್ತಿದ್ದು,ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಬೇಕು ಮತ್ತು ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸ ಬೇಕೆಂದರು.
ಗ್ರಾಪಂ ಅಧ್ಯಕ್ಷ ಎಂ.ಜಿ.ಜಯರಾಮರೆಡ್ಡಿ ಮಾತಾನಾಡಿ,ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಮಕ್ಕಳಿಂದ ಸಾಧ್ಯವಿದೆ. ತಮ್ಮ ಮನೆಗಳಲ್ಲಿ ಪೋ ಷಕರ ಮನವೊಲಿಸುವ ಶಕ್ತಿ ಅವರಿಗೆ ಇದೆ ಎಂದರು. ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್,ಡಾ.ದೊಡ್ಡಮಲ್ಲಯ್ಯ,ಪರಿಸರವಾದಿ ಎಚ್ ಎಸ್‌ಕೆ ಸ್ವಾಮಿ ಮಾತಾನಾಡಿದರು. ಮುಖ್ಯಶಿಕ್ಷಕ ಜಿ.ಎನ್.ಅಜ್ಜಪ್ಪ,ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್,ನಿವೃತ್ತ ಶಿಕ್ಷಕ ಎಂ.ಬಿ.ರಾಜಪ್ಪ,ಕೆ.ಬಿ.ಜಯ ದೇವಮೂರ್ತಿ,ಉಗ್ರೇಶ್‌ಮೆದೇಹಳ್ಳಿ,ಶಿಕ್ಷಕರು ಎಂ.ಮಂಜುನಾಥ್‌ಕಳ್ಳಿಹಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net