

ಹುಬ್ಬಳ್ಳಿ: ಇಲ್ಲಿಯ ಅಕ್ಷಯನಗರದ ಚೇತನ್ ಪಬ್ಲಿಕ್ ಸಿಬಿಎಸ್ಇ ಶಾಲೆಯಲ್ಲಿ ಗುರುವಾರ ಕಾರ್ವಿುಕರ ದಿನಾಚರಣೆಯಂದು ಮೂನ್ ಮೆಟರ್ನಿಟಿ ಆಸ್ಪತ್ರೆ ಮತ್ತು ವಿಹಾನ್ ಹಾರ್ಟ್ ಸೆಂಟರ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಜಿ.ವಿ.ವಳಸಂಗ ಉದ್ಘಾಟಿಸಿದರು. ಕಾರ್ಯದರ್ಶಿ ಪ್ರೊ. ಮಹೇಶ ದ್ಯಾವಪ್ಪನವರ್, ಪ್ರಾಂಶುಪಾಲ ಡಾ. ಜೆರುಷಾ ನಡುಗಡ್ಡಿ ಹಾಗೂ ವೈದ್ಯರು ಇದ್ದರು.
ತಜ್ಞ ವೈದ್ಯರಾದ ಡಾ. ಹರಿಕೃಷ್ಣ, ಡಾ. ಭರತ್ ಅಂಗಡಿ, ಡಾ. ಲಕ್ಷ್ಮೀ ಗುಮಾಸ್ತೆ, ಡಾ. ಪ್ರೆಸಿಲ್ಲಾ ಥಾಮಸ್, ಡಾ. ಭುವನೇಶ್,</p><p>ಡಾ. ಗ್ರೀಷ್ಮಾ ಹಬೀಬ್, ಡಾ. ಅಮಿತ್ ಬ್ಯಾತನಲ್ ತಪಾಸಣೆ ನಡೆಸಿದರು. ಪೋಷಕರು, ಶಿಕ್ಷಕ-ಶಿಕ್ಷಕೇತರ ಸಿಬ್ಬ್ಬದಿ ಶಿಬಿರ ಸದುಪಯೋಗ ಪಡೆದುಕೊಂಡರು.