ಆರೋಗ್ಯ ಕಾಪಾಡಿಕೊಂಡಲ್ಲಿ ಸ್ವಸ್ಥ ಸಮಾಜ ನಿರ್ಮಾಣ

26 ckm 1
ಚಿಕ್ಕಮಗಳೂರು ಜಿಲ್ಲೆಯ ಕಾಮನದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತವೇರಿ ಗ್ರಾಮದ ಸಂತ ರೋಕಿ ಸಮುದಾಯ ಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಹಾಗೂ ಕಣ್ಣು ತಪಾಸಣಾ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಸಿಎಂಎಸ್‌ಎಸ್‌ಎಸ್ ಸಂಸ್ಥೆ ನಿರ್ದೇಶಕ ಫಾದರ್ ಆರ್.ಶಾಂತರಾಜ್ ಉದ್ಘಾಟಿಸಿದರು. ಧರ್ಮಗುರು ಎಸ್.ಜಿ.ಪ್ರಶಾಂತ್, ವೇಳಾಂಗಣಿ ಮೇರಿ, ವಿಕ್ಟೋರಿಯಾ ಡಿಸೋಜಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸಿಎಂಎಸ್‌ಎಸ್‌ಎಸ್ ಸಂಸ್ಥೆ ನಿರ್ದೇಶಕ ಫಾದರ್ ಆರ್.ಶಾಂತರಾಜ್ ತಿಳಿಸಿದರು.

ತರೀಕೆರೆ ತಾಲೂಕಿನ ಕಾಮನದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತವೇರಿ ಗ್ರಾಮದ ಸಂತ ರೋಕಿ ಸಮುದಾಯ ಭವನದಲ್ಲಿ ಮಂಗಳವಾರ ಸಿಎಂಎಸ್‌ಎಸ್‌ಎಸ್ ಸಂಸ್ಥೆ ಹಾಗೂ ಚಿಕ್ಕಮಗಳೂರಿನ ಹೋಲಿಕ್ರಾಸ್ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸಂತವೇರಿ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಹಾಗೂ ಕಣ್ಣು ತಪಾಸಣಾ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮನುಷ್ಯರು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ಅನಾರೋಗ್ಯ ಸಂಭವಿಸಿದ ತಕ್ಷಣ ನಿರ್ಲಕ್ಷö್ಯ ವಹಿಸದೇ ಪ್ರಥಮ ಚಿಕಿತ್ಸೆಯನ್ನು ಪಡೆಯುವ ಮೂಲಕ ಕಾಯಿಲೆಯಿಂದ ದೂರವಾಗಬಹುದು. ಮೊದಲ ಹಂತದಲ್ಲೇ ತಪಾಸಣೆ ಮಾಡಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಕೋಟಿ ರೂ. ಗಳನ್ನು ಕೊಟ್ಟರೂ ಉತ್ತಮ ಆರೋಗ್ಯ ಸಿಗುವುದಿಲ್ಲ. ಮನುಷ್ಯರು ಆರೋಗ್ಯವಂತರಾಗಿ ಇರಬೇಕಾದರೆ ಕಾಲ ಕಾಲಕ್ಕೆ ತಕ್ಕಂತೆ ತಪಾಸಣೆ ಮಾಡಿಸುವುದು ಒಳ್ಳೆಯದು ಹಾಗೂ ತಮ್ಮ ಮನೆಗಳ ಸುತ್ತಮುತ್ತ ಗಿಡ ಮರಗಳನ್ನು ಬೆಳೆಸುವಂತೆ ಮನವಿ ಮಾಡಿದರು.

ಸಂತ ರೋಕಿ ಚರ್ಚ್ನ ಧರ್ಮ ಗುರು ಎಸ್.ಜಿ.ಪ್ರಶಾಂತ್ ಮಾತನಾಡಿ, ನಾವುಗಳು ಪ್ರತಿನಿತ್ಯ ಸೇವಿಸುತ್ತಿರುವ ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ವಸ್ತುಗಳು ಸೇರುತ್ತಿರುವುದರಿಂದ ಕಾಯಿಲೆಗಳು ಉಲ್ಬಣವಾಗುತ್ತಿವೆ ಎಂದು ಹೇಳಿದರು.

ಸಿಎಂಎಸ್‌ಎಸ್‌ಎಸ್ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಉಪಯುಕ್ತವಾದ ಅರಿವು ಕಾರ್ಯಕ್ರಮಗಳನ್ನು ನಡೆಸಿ, ಜನರ ಕಷ್ಟ ಸುಖಗಳಿಗೆ ಸ್ಪಂದಿಸಲಾಗುವುದು ಎಂದು ತಿಳಿಸಿದರು.

ಉಚಿತ ಶಿಬಿರದಲ್ಲಿ ೧೩ ಜನರು ರಕ್ತದಾನ ಮಾಡಿದರು. ೯೦ ಜನರು ಬಿ.ಪಿ ಮತ್ತು ಶುಗರ್ ಪರೀಕ್ಷಿಸಿಕೊಂಡರೆ, ೭೨ ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದು, ೧೮೦ಕ್ಕೂ ಜನರು ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು.

ಕಾರ್ಯಕ್ರಮದಲ್ಲಿ ಹೋಲಿಕ್ರಾಸ್ ಆಸ್ಪತ್ರೆಯ ವೇಳಾಂಗಣಿ ಮೇರಿ, ಸಿಎಂಎಸ್‌ಎಸ್‌ಎಸ್ ಸಂಸ್ಥೆಯ ಯೋಜನಾಧಿಕಾರಿ ವಿಕ್ಟೋರಿಯಾ ಡಿಸೋಜಾ, ಸಮುದಾಯ ಶಿಕ್ಷಕಿಯರಾದ ಎಮಿಲ್ಡಾ, ವೀಣಾ, ರುಕ್ಮಿಣಿ, ಕಲ್ಪನಾ, ಶೋಭಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net