ಆರೋಗ್ಯ ಉಚಿತ ಶಿಬಿರ

18 gkp 04
Published on


ಗೋಣಿಕೊಪ್ಪ: ಗ್ರಾಮ ಮಟ್ಟದಲ್ಲಿ ಆರೋಗ್ಯ ಉಚಿತ ಶಿಬಿರಗಳು ಹೆಚ್ಚಾಗಿ ನಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಮುಂದೆ ಬರಬೇಕು ಎಂದು ಪೊನ್ನಂಪೇಟೆ ನಾಗರಿಕ ವೇದಿಕೆಯ ಉಪಾಧ್ಯಕ್ಷ ಎ.ಎ.ಎರ್ಮು ಹಾಜಿ ತಿಳಿಸಿದರು.


ಪೊನ್ನಂಪೇಟೆ ಇಗ್ಗುತ್ತಪ್ಪ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ, ಪೊನ್ನಂಪೇಟೆ ನಾಗರಿಕ ವೇದಿಕೆ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಆಶ್ರಯದಲ್ಲಿ ನಡೆದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.


ಪೊನ್ನಂಪೇಟೆ ನಾಗರಿಕ ವೇದಿಕೆ ಹಲವು ಜನಪರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇಂತಹ ಆರೋಗ್ಯ ತಪಾಸಣಾ ಶಿಬಿರಗಳಿಂದ, ಸ್ಥಳೀಯ ನಾಗರಿಕರಿಗೆ ಉಪಯೋಗವಾಗಲಿದೆ ಎಂದರು.


ಪೊನ್ನಂಪೇಟೆಯ ದಂತ ವೈದ್ಯೆ ಬೊಟ್ಟಂಗಡ ದೀವಿಕ ಪ್ರತಿಯೊಬ್ಬರು ಆರೋಗ್ಯ ಶಿಬಿರಗಳ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.
ವೇದಿಕೆಯ ಅಧ್ಯಕ್ಷ ಪಿ.ಎನ್. ಬೋಸು ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಾಜೇಂದ್ರ, ಸಹಕಾರ್ಯದರ್ಶಿ ದಿನೇಶ್, ನಿರ್ದೇಶಕ ವಾಸು ಉತ್ತಪ್ಪ, ಪಿ.ಬಿ.ಪೂಣಚ್ಚ, ಆಶಾ ಪೂಣಚ್ಚ, ಟಿ.ಬಿ.ಪೂಣಚ್ಚ, ಮೂಕಳೇರ ಲಕ್ಷ್ಮಣ್, ದಿನು ಚಿಣ್ಣಪ್ಪ, ನೆಹರು ಉತ್ತಪ್ಪ ಹಾಗೂ ಪ್ರಮುಖರಾದ ಮತ್ರಂಡ ಅಪ್ಪಚ್ಚು, ಕಳ್ಳೆಂಗಡ ಗಣಪತಿ, ಅಣ್ಣಾಳಮಾಡ ದೇವಯ್ಯ, ಮಳವಂಡ ಅರವಿಂದ್ ಕುಟ್ಟಪ್ಪ ಇದ್ದರು.


ಆರೋಗ್ಯ ಇಲಾಖೆಯ ಕೆ.ಎನ್.ಸಜಿತ, ಜಿ.ಎಸ್.ಅನಿತಾ, ಕೆ.ಆರ್.ರುಕ್ಮಿಣಿ, ಎನ್.ಸಿ.ಚಂದ್ರಶೇಖರ್, ಎನ್.ಎಂ.ತ್ರಿಮೂರ್ತಿ, ಟಿ.ಆರ್.ಅವಿನಾಶ್, ಆರೋಗ್ಯ ತಪಾಸಣೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net