ಆರೋಗ್ಯ ಉಚಿತ ತಪಾಸಣೆ ಶಿಬಿರ ನಾಳೆ

Free health check-up camp tomorrow
ಸರಗೂರು ಪಟ್ಟಣದ ವಿವೇಕಾನಂದ ಸ್ಮಾರಕ ಆಸ್ಪತ್ರೆ ಕಚೇರಿಯಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರದ ಪೋಸ್ಟರ್‌ಗಳನ್ನು ಗಣ್ಯರು ಉದ್ಘಾಟಿಸಿದರು. ಡಾ. ರವೀಂದ್ರನಾಥ್ ಶ್ರಾಫ್, ಎಸ್.ಬಿ.ಪ್ರಸಾದ್, ಸುರೇಶ್ ಜೈನ್, ಎಸ್.ಬಿ.ಶಮಂತ್, ಡಗ್ಲರಾಮ್, ಕೆ.ಎಂ.ಶಂಕರ್, ಬಿ.ಜಿ.ಸಂಧ್ಯಾ, ಬಿ.ಜೆ.ಬೀನಾ ಇತರರಿದ್ದರು.
ಸರಗೂರು ಪಟ್ಟಣದ ವಿವೇಕಾನಂದ ಸ್ಮಾರಕ ಆಸ್ಪತ್ರೆ ಕಚೇರಿಯಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರದ ಪೋಸ್ಟರ್‌ಗಳನ್ನು ಗಣ್ಯರು ಉದ್ಘಾಟಿಸಿದರು. ಡಾ. ರವೀಂದ್ರನಾಥ್ ಶ್ರಾಫ್, ಎಸ್.ಬಿ.ಪ್ರಸಾದ್, ಸುರೇಶ್ ಜೈನ್, ಎಸ್.ಬಿ.ಶಮಂತ್, ಡಗ್ಲರಾಮ್, ಕೆ.ಎಂ.ಶಂಕರ್, ಬಿ.ಜಿ.ಸಂಧ್ಯಾ, ಬಿ.ಜೆ.ಬೀನಾ ಇತರರಿದ್ದರು.
Published on

ಸರಗೂರು: ಪಟ್ಟಣದ ವಿವೇಕಾನಂದ ಸ್ಮಾರಕ ಆಸ್ಪತ್ರೆ ಆವರಣದಲ್ಲಿ ಸೆ.26ರಂದು ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿದೆ.

ವಿವೇಕಾನಂದ ಸ್ಮಾರಕ ಆಸ್ಪತ್ರೆ ಹಾಗೂ ಸರಗೂರು ವರ್ತಕರ ಮಂಡಳಿ, ಜೈನ್ ಮಿಲನ್, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ರಾಜಸ್ಥಾನ ಸಂಘ, ಸರಗೂರು ಮತ್ತು ಎಚ್.ಡಿ.ಕೋಟೆ ತಾಲೂಕು ಮೆಡಿಕಲ್ ಅಸೋಸಿಯೇಷನ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ರೋಟರಿ ಮೈಸೂರು ಮೆಟ್ರೋ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಶಿಬಿರ ನಡೆಯಲಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ರವಿಂದ್ರನಾಥ್ ಶ್ರಾಫ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಒಂದೇ ಸ್ಥಳದಲ್ಲಿ ವಿವಿಧ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಹಾಗೂ ಸೂಕ್ತ ಸಲಹೆ ಪಡೆಯಲು ಅನುಕೂಲವಾಗುವಂತೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.

ಶಿಬಿರದಲ್ಲಿ ಸಾಮಾನ್ಯ ರೋಗಗಳ ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ, ಸಾಮಾನ್ಯ ಶಸ್ತ್ರಚಿಕಿತ್ಸೆ, ಕೀಲು ಮತ್ತು ಮೂಳೆ, ಮಕ್ಕಳ ತಜ್ಞರ ಸೇವೆ, ಕಣ್ಣಿನ ಚಿಕಿತ್ಸೆ, ದಂತ ಚಿಕಿತ್ಸೆ, ಕಿವಿ-ಮೂಗು-ಗಂಟಲು ತಜ್ಞರ ಸೇವೆ, ಕ್ಯಾನ್ಸರ್ ತಪಾಸಣೆ, ಹೃದಯರೋಗ, ನರರೋಗ, ಬಂಜೆತನ ನಿವಾರಣೆ, ಮೂತ್ರಪಿಂಡ ಶಸ್ತ್ರಚಿಕಿತ್ಸೆ, ಚರ್ಮರೋಗ ಹಾಗೂ ಆಯುರ್ವೇದ ಚಿಕಿತ್ಸೆಯಂತಹ ವಿವಿಧ ಸೇವೆಗಳು ದೊರೆಯಲಿವೆ ಎಂದರು.

ವರ್ತಕರ ಮಂಡಳಿ ಅಧ್ಯಕ್ಷ ಎಸ್.ಬಿ.ಪ್ರಸಾದ್, ಲಯನ್ಸ್ ಅಕಾಡೆಮಿ ಶಾಲೆ ಟ್ರಸ್ಟ್ ಅಧ್ಯಕ್ಷ ಸುರೇಶ್ ಜೈನ್, ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಯುವ ಘಟಕದ ಅಧ್ಯಕ್ಷ ಎಸ್.ಬಿ.ಶಮಂತ್, ರಾಜಸ್ಥಾನ ಸಂಘದ ಡಗ್ಲರಾಮ್, ಆಸ್ಪತ್ರೆಯ ಉಪ ನಿರ್ದೇಶಕ ಕೆ.ಎಂ . ಶಂಕರ್, ವ್ಯವಸ್ಥಾಪಕಿ ಬಿ.ಜಿ.ಸಂಧ್ಯಾ, ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕಿ ಬಿ.ಜೆ.ಬೀನಾ, ಕಾರ್ಯಚಟುವಟಿಕೆಯ ವ್ಯವಸ್ಥಾಪಕ ವೆಂಕಟಸ್ವಾಮಿ, ಸಮುದಾಯ ಸಂರ್ಪಕ ವ್ಯವಸ್ಥಾಪಕ ಬಂಗಾರಶಟ್ಟಿ, ಗೋಪಾಲಕೃಷ್ಣ, ನಾಗರತ್ನಾ, ರೂಪೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net