

ಸುಂಟಿಕೊಪ್ಪ: ಮಾದಾಪುರ ಗ್ರಾಮ ಪಂಚಾಯತ್ ಆವರಣದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರಿಗಾಗಿ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಶನಿವಾರ ಜರುಗಿತು.
ಪ್ರಸ್ತಾವಿಕವಾಗಿ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮೇಶ್, ಗ್ರಾಮ ಆರೋಗ್ಯ ಯೋಜನೆ ಅಡಿ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ರಾಜ್ಯಾದ್ಯಂತ ಮೇ 22 ರಿಂದ ಜೂ. 22ರ ವರೆಗೆ ಹಮ್ಮಿಕೊಳ್ಳಲಾಗುತ್ತಿದೆ. ಇದು ಸರ್ಕಾರದ ಮಹತ್ವ ಯೋಜನೆಯಾಗಿದೆ. ಗ್ರಾಮಸ್ಥರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಶಿಬಿರದಲ್ಲಿ ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆಯ ಪ್ರಮಾಣ, ಹಿಮೋಗ್ಲೋಬಿನ್, ತೂಕ ಮತ್ತು ಎತ್ತರ ಹಾಗೂ ಚಿಕ್ಕ ಮಕ್ಕಳಿಗೆ ನ್ಯೂಟ್ರಿಷನ್ ತಪಾಸಣೆ ಮಾಡಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾನಸ ಶಿಬಿರ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಿಶಾ, ಗ್ರಾ.ಪಂ. ಸದಸ್ಯರಾದ ಲತೀಫ್, ಅಂತೋನಿ, ನಿರೂಪಾ, ಸೋಮಣ್ಣ, ಬಿದ್ದಪ್ಪ, ಭಾಗೀರಥಿ, ಶೀಲಾ, ಗೋಪಿ ಸುರೇಶ್, ಗ್ರಾ.ಪಂ. ಲೆಕ್ಕ ಸಹಾಯಕಿ ಅನಿತಾ ಹಾಗೂ ಸಿಬ್ಬಂದಿ ಇದ್ದರು.