ಆರೋಗ್ಯ ಇಲಾಖೆಯ 75 ಸಿಬ್ಬಂದಿಗೆ ಸೋಂಕು

Corona
Published on

ಬೆಳಗಾವಿ: ಜಿಲ್ಲೆಯಲ್ಲಿ ಕರೊನಾ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಆರೋಗ್ಯ ಇಲಾಖೆಯ 75 ಮಂದಿಗೆ ಸೋಂಕು ದೃಢಪಟ್ಟಿದೆ. 18 ಜನ ಸೋಂಕಿನಿಂದ ಮೃತರಾಗಿದ್ದಾರೆ. ಅವರ ಕುಟುಂಬದವರಿಗೆ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ವಿ. ಮುನ್ಯಾಳ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-2ನೇ ಅಲೆಯಲ್ಲಿ ಅಷ್ಟೊಂದು ಸಾವು ನೋವು ಸಂಭವಿಸಿಲ್ಲ. ಸರ್ಕಾರದ ಆದೇಶದಂತೆ ಶೇ.99 ಮಂದಿಗೆ ಕರೊನಾ ಲಸಿಕೆ ನೀಡಿರುವುದರಿಂದ ಪಾಸಿಟಿವಿಟಿ ಹಾಗೂ ಸಾವಿನ ಪ್ರಮಾಣ ಇಳಿಮುಖವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net