ಆರೋಗ್ಯ ಅರಿವಿಗಾಗಿ ಬೀದಿ ನಾಟಕ

08-kkr6(12-23
Published on

ಕಿಕ್ಕೇರಿ: ಆರೋಗ್ಯದ ಅರಿವಿಲ್ಲದೆ ರೋಗ ಉಲ್ಬಣಿಸಿ ಸಾವು-ನೋವು ಸಂಭವಿಸುತ್ತಿದ್ದು, ಈ ಕುರಿತು ಜನರಲ್ಲಿ ಅರಿವು ಮೂಡಿಸಲು ಜಿಪಂ ಆಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಬೀದಿ ನಾಟಕ ಏರ್ಪಡಿಸಲಾಗಿತ್ತು.


ಅರುಣೋದಯ ಕಲಾ ತಂಡದ ಕಲಾವಿದರು ನಾಟಕದ ಮೂಲಕ ಆಯುಷ್ಮಾನ್ ಕಾರ್ಡ್‌ನ ಉಪಯೋಗ, ಮನೋವೈಕಲ್ಯತೆ, ಭ್ರೂಣ ಹತ್ಯೆಯಂತಹ ಸಾಮಾಜಿಕ ಸಮಸ್ಯೆ, ತಾಯಿ-ಮಗುವಿನ ಆರೈಕೆ, ಸಾಂಕ್ರಾಮಿಕ, ರೋಗಗಳ ತಡೆಗಟ್ಟುವಿಕೆ, ಮುಂಜಾಗ್ರತೆ, ಹದಿಹರೆಯದ ಸಮಸ್ಯೆಯಂತಹ ಹಲವಾರು ವಿಷಯಗಳ ಕುರಿತು ಅಭಿನಯ, ನೃತ್ಯ, ಗೀತೆಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.


ಕಲಾ ತಂಡದ ಧನಂಜಯ, ಸೋಮಶೇಖರ್, ನಾಗಯ್ಯ, ನಾಗಣ್ಣ, ಮಂಜುಳಾ, ರತ್ನಮ್ಮ, ಆಶಾ ಕಾರ್ಯಕರ್ತೆಯರಾದ ಮಂಜುಳಾ, ಪಾರ್ವತಿ, ಜ್ಯೋತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net