ಆರೋಗ್ಯ ರಕ್ಷಣೆಗೆ ಆಯುಷ್ಮಾನ್ ಸಹಕಾರಿ

22srt-1
Published on

ಶಿರಹಟ್ಟಿ: ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಯೋಜಿತವಾಗಿ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆ ಜಾರಿಗೆ ತಂದಿದ್ದು, ಇದು ಆರ್ಥಿಕ ದುರ್ಬಲರಾದ ಬಡ ಕುಟುಂಬ ವರ್ಗದವರಿಗೆ ಸಂಜೀವಿನಿಯಾಗಲಿದೆ ಎಂದು ಗ್ರಾಪಂ ಸದಸ್ಯ ತಿಮ್ಮರಡ್ಡಿ ಮರಡ್ಡಿ ಹೇಳಿದರು.

ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 500ಕ್ಕೂ ಅಧಿಕ ಕುಟುಂಬಗಳಿಗೆ ಉಚಿತ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸಿ ಅವರು ಮಾತನಾಡಿದರು. ಅರ್ಹ ಕುಟುಂಬಸ್ಥರು ಈ ಕಾರ್ಡ್ ಸೌಲಭ್ಯ ಪಡೆದು ರೋಗಮುಕ್ತರಾಗಿ ಜೀವನ ಸಾಗಿಸಬೇಕಾದ ಅಗತ್ಯವಿದೆ ಎಂದರು.

ಗ್ರಾಪಂ ಸದಸ್ಯ ಮೋಹನ ಗುತ್ತೆಮ್ಮನವರ, ಕೊಟ್ರೇಶ ಸಜ್ಜನರ, ನಾಗರಾಜ ಅಕ್ಕೂರ, ಗಿರೀಶರಡ್ಡಿ ಮೇಕಳಿ, ಶಿವರಾಜ ಸಜ್ಜನರ, ರಾಜು ಮಾಂಡ್ರೆ, ಚನ್ನು ಅಕ್ಕೂರ, ವಿಜಯರಡ್ಡಿ ಮೇಕಳಿ, ಶ್ರೀಕಾಂತ ಬಟ್ಟೂರ, ವಿನಾಯಕ ಅಳವಂಡಿ, ವೆಂಕಟೇಶ ಬಸವರಡ್ಡಿ, ರಬ್ಬಾನಿ ಚೌರಿ, ರಾಖೇಶ ಪಾಟೀಲ ಇತರರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net