ಆರು ಲಕ್ಷ ರೂ.ಅಪಹರಿಸಿ ಪರಾರಿ

rupee
Published on

ಚಿತ್ರದುರ್ಗ:ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಬೈಕ್‌ನಲ್ಲಿ ಹೋಗುತ್ತಿದ್ದ ವರ್ತಕನೊಬ್ಬನಿಂದ ಆರು ಲಕ್ಷ ರೂ.ಅಪಹರಿಸಿಕೊಂಡು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಹೊಳಲ್ಕೆರೆಯಲ್ಲಿ ಬುಧವಾರ ನಡೆದಿದೆ.

ನಗರದ ಕರ್ನಾಟಕ ಬ್ಯಾಂಕ್‌ನಿಂದ ಮಧ್ಯಾಹ್ನ 1.15ರ ಹೊತ್ತಿನಲ್ಲಿ ಹಣ ಡ್ರಾ ಮಾಡಿದ್ದ ಪಟ್ಟಣದ ಫರ್ನಿಚರ್ ವ್ಯಾಪಾರಿ ಷಡಕ್ಷರಯ್ಯ, ಅದನ್ನು ತನ್ನ ಬೈಕ್‌ನ ಸೈಡ್‌ಬ್ಯಾಗ್‌ನಲ್ಲಿ ಇಟ್ಟುಕೊಂಡು ಶಿವಮೊಗ್ಗ ರಸ್ತೆಯಲ್ಲಿ ಸಾಗುತ್ತಿದ್ದರು. ಇದನ್ನು ಗಮನಿಸಿದ್ದ ದುಷ್ಕರ್ಮಿಗಳು,ಷಡಕ್ಷ ರ ಯ್ಯರನ್ನು ಹಿಂಬಾಲಿಸಿ ಕೃತ್ಯ ಎಸಗಿ ಕಣ್ಮರೆಯಾಗಿದ್ದಾರೆ. ಹೊಳಲ್ಕೆರೆ ಠಾಣೆ ಪಿಎಸ್‌ಐ ಸಚಿನ್ ಪಟೇಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net