

ಯಾದಗಿರಿ: ನಾರಯಣಪುರ ಜಲಾಶಯದ ಪ್ರದೇಶದಲ್ಲಿ ಮತ್ತು ಸಾಲವಡಗಿ ಕ್ರಾಸ್ ಬಳಿ ನಡೆಯುತ್ತಿರುವ
ಬೂದಿಹಾಳ-ಪೀರಾಪುರಏತ ನೀರಾವರಿ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುರಪುರ ಮತ್ತು ಶಹಾಪುರ ಮತಕ್ಷೇತ್ರದ ಹಲವು ರೈತರಿಗೆ ಬೂದಿಹಾಳ-ಪೀರಾಪುರ ಯೋಜನೆ ನೆರವಾಗಲಿದ್ದು, ಕಾಮಗಾರಿ ತ್ವರಿತ ಗತಿಯಲ್ಲಿ ಗುಣಮಟ್ಟದಿಂದ ನೆರವೇರಿಸಬೇಕು. ಈಗಾಗಲೇ ತಾಳಿಕೋಟಿ ತಾಲೂಕಿನ ಸಾಲವಡಗಿ ಕ್ರಾಸ್ವರೆಗೆ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ 6 ತಿಂಗಳೊಳಗೆ ರೈತರ ಜಮೀನುಗಳಿಗೆ ನೀರುತಲುಪಿಲಿದೆ. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ನೀರು ಪೋಲಾಗುವುದನ್ನು ತಡೆಗಟ್ಟುವ ಸಲುವಾಗಿ ಈ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.