ಆರು ಜೂಜುಕೋರರ ವಿರುದ್ಧ ಪ್ರಕರಣ

Crime Logo
Published on

ಚಾಮರಾಜನಗರ: ಸಾರ್ವಜನಿಕ ಜಾಗದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದವರ ಮೇಲೆ ಪೊಲೀಸರು ಶನಿವಾರ ದಾಳಿ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಲೂಕಿನ ಹೊಂಗನೂರು ಗ್ರಾಮದ ಪಾಳು ಬಿದ್ದಿರುವ ಜಾಗದಲ್ಲಿ ಜೂಜಾಡುತ್ತಿದ್ದ ಅದೇ ಗ್ರಾಮದ ಕುಮಾರ್, ದೊರೆಸ್ವಾಮಿ, ನವೀನ್, ರಘು, ಮಹದೇವಯ್ಯ, ಮಹದೇವಪ್ರಸಾದ್ ಹಾಗೂ ಮಣಿಕಂಠ ಸ್ವಾಮಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಪೂರ್ವ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನವೀನ್ ಅವರ ನೇತೃತ್ವದ ತಂಡ ಜೂಜು ಅಡ್ಡೆ ಮೇಲೆ ದಾಳಿ ನಡೆಸಿ,ಪಣಕ್ಕಿಟ್ಟಿದ್ದ 2100 ರೂ., ಹಣವನ್ನು ವಶಪಡಿಸಿಕೊಂಡು 6 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net