ಆರು ಜನರಿಗೆ ಕೋವಿಡ್ ದೃಢ

carona logo
Published on

ಕಾರವಾರ: ಜಿಲ್ಲೆಯಲ್ಲಿ ಮಂಗಳವಾರ ಆರು ಜನರಿಗೆ ಕೋವಿಡ್-19 ದೃಢಪಟ್ಟಿದೆ. ಒಟ್ಟಾರೆ ಜಿಲ್ಲೆಯ ಸೋಂಕಿತರ ಸಂಖ್ಯೆ 120 ತಲುಪಿದ್ದು, ಅದರಲ್ಲಿ 93 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ.

ಮೇ 19 ರಂದು ಮಹಾರಾಷ್ಟ್ರದಿಂದ ಆಗಮಿಸಿ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ ಕುಟುಂಬದ 10 ವರ್ಷದ ಬಾಲಕಿ(ಯುಕೆ-89) ಜೂನ್ 4 ರಂದು ಸೋಂಕು ಖಚಿತವಾಗಿತ್ತು. ಆಕೆ ಚಿಕಿತ್ಸೆ ಪಡೆದು ಗುಣಮುಖಳಾಗಿದ್ದಾಳೆ. ಆದರೆ, ಆಕೆಯ ಸಂಪರ್ಕಕ್ಕೆ ಬಂದ ಯಲ್ಲಾಪುರ ದೇಶಪಾಂಡೆ ನಗರದ 33 ವರ್ಷದ ವ್ಯಕ್ತಿಗೆ (ಯುಕೆ-115)ರೋಗ ಇರುವುದು ಖಚಿತವಾಗಿದೆ.

ಇನ್ನು ಮುಂಡಗೋಡಿನ ಟಿಬೆಟಿಯನ್ ಕ್ಯಾಂಪ್ -4 ಕ್ಕೆ ಜೂನ್ 7 ರಂದು ದೆಹಲಿಯಿಂದ ಮರಳಿ ಟಿಸಿವಿ ಹಾಸ್ಟೆಲ್​ನಲ್ಲಿ ಕ್ವಾರಂಟೈನ್​ನಲ್ಲಿದ್ದ 30 ವರ್ಷದ ವ್ಯಕ್ತಿಗೆ(ಯುಕೆ-117) ಕರೊನಾ ದೃಢಪಟ್ಟಿದೆ. ಆತನ ಮನೆಯ 10 ಜನ ಸೇರಿ ಒಟ್ಟು 40 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಮಹಾರಾಷ್ಟ್ರದಿಂದ ಮರಳಿದ ಭಟ್ಕಳದ ತೆರನಮಕ್ಕಿಯ 43 ವರ್ಷದ ಪುರುಷ(ಯುಕೆ-116), ಯಲ್ಲಾಪುರ ಕುಚಗಾಂವನ 46 ವರ್ಷದ ಪುರುಷ(ಯುಕೆ-118), 49 ವರ್ಷದ ಮಹಿಳೆ(ಯುಕೆ-119), ಹೊನ್ನಾವರ ಕೆಳಗಿನ ಪಾಳ್ಯದ 36 ವರ್ಷದ ಪುರುಷ(ಯುಕೆ-120) ಅವರಲ್ಲಿ ರೋಗ ದೃಢಪಟ್ಟಿದೆ. ಎಲ್ಲರನ್ನೂ ಕಾರವಾರ ಕ್ರಿಮ್್ಸ ಕರೊನಾ ವಾರ್ಡ್​ಗೆ ಸಾಗಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net