ಆರು ಅಂಗಡಿಗಳ ಬೀಗ ಮುರಿದ ಕಳ್ಳರು

Theft in Ilakall
Published on

ರಾಮದುರ್ಗ: ಪಟ್ಟಣದ ಜುನಿಪೇಟೆಯಲ್ಲಿರುವ ಆರು ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಲು ಯತ್ನಿಸಿದ ಟನೆ ಸೋಮವಾರ ತಡರಾತ್ರಿ ನಡೆದಿದೆ. ಜುನಿಪೇಟೆಯ ಬಾಳಿಕಾಯಿ ಇಲೆಕ್ಟ್ರಿಕಲ್​, ಪುರಂದರೆ ಗಡಿಯಾರ ಅಂಗಡಿ, ಯಾದವಾಡ ಅಡುಗೆ ಎಣ್ಣೆ ಅಂಗಡಿ, ಮಹಾಂತ ಕಂಪ್ಯೂಟರ್ಸ್​, ಅಲ್ಲಮ್ಮಪ್ರಭು ೋಟೋ ಸ್ಟೂಡಿಯೋ, ಭವಾನಿ ಬಟ್ಟೆ ಅಂಗಡಿಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಕೆಲ ಅಂಗಡಿಯಲ್ಲಿ ನಗದು ಕದ್ದಿರುವ ಶಂಕೆ ಇದೆ ಎಂದು ಸ್ಥಳ ಪರಿಶೀಲಿಸಿದ ಪೊಲೀಸರು ತಿಳಿಸಿದ್ದಾರೆ. ಸಿಪಿಐ ವಿನಾಯಕ ಬಡಿಗೇರ ಭೇಟಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net