

ಕೆಂಭಾವಿ: ಪಟ್ಟಣದ ಉತ್ತರಾದಿ ಮಠದ ಯತಿಚತುಷ್ಠಯರ ವೃಂದಾವನ ಸನ್ನಿಧಿಯಲ್ಲಿ ಮೂರು ದಿನ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೨ನೇ ಆರಾಧನಾ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಬೆಳಗ್ಗೆ ಪ್ರಭೋದೋತ್ಸವ, ವಿಷ್ಣು ಸಹಸ್ರನಾಮ, ವಾಯುಸ್ತುತಿ, ಸುಂದರಕಾಂಡ, ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಅರ್ಚಕ ಸರ್ವೋತ್ತಮಾಚಾರ್ಯ ಜೋಶಿ ನೇತೃತ್ವದಲ್ಲಿ ವೃಂದಾವನಕ್ಕೆ ವಿಶೇಷ ಅಲಂಕಾರ, ತೀರ್ಥಪ್ರಸಾದ, ಸಂಜೆ ಭಜನೆ ಸೇರಿ ಹಲವು ಧಾರ್ಮಿಕ ಕರ‍್ಯಕ್ರಮಗಳು ಜರುಗಿದವು.
ಶನಿವಾರ ನಾಡಗೇರ ಹನುಮಂತ ದೇವಸ್ಥಾನಕ್ಕೆ ಪಲ್ಲಕ್ಕಿ ಮೆರವಣಿಯೊಂದಿಗೆ ತೆರಳುವ ಮೂಲಕ ಉತ್ಸವ ತೆರೆ ಕಂಡಿತು.
ಶೇಷಗಿರಿರಾವ ಕುಲಕರ್ಣಿ, ವಾಮನರಾವ ದೇಶಪಾಂಡೆ ಹಾಗೂ ರಾಘವೇಂದ್ರ ನಾಡಿಗೇರ ಅವರಿಂದ ಅನ್ನ ಸಂತರ್ಪಣೆ ನಡೆಯಿತು. ಜಯಸತ್ಯಪ್ರಮೋದ ಸೇವಾ ಸಂಘದ ಸದಸ್ಯರು, ಪ್ರಮೋದಿನಿ ಮಹಿಳಾ ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.