

ಕೆಂಭಾವಿ: ಕೂಡಲಗಿ ಗ್ರಾಮದ ಬಾಬಾ ಮಹಾರಾಜ ಮಠದಲ್ಲಿ ಸದ್ಗುರು ಶ್ರೀ ಶಾಂತಾನAದ ಸರಸ್ವತಿ ಸ್ವಾಮಿಗಳ 91ನೇ ಆರಾಧನಾ ಮಹೋತ್ಸವ ಮಂಗಳವಾರ ಸಂಪನ್ನಗೊAಡಿತು.
ಕಳೆದ ಮೂರು ದಿನಗಳಿಂದ ಪೀಠಾಧಿಪತಿ ಶ್ರೀ ಉಮಾಕಾಂತ ಸಿದ್ಧರಾಜ ಮಹಾರಾಜರ ನೇತೃತ್ವದಲ್ಲಿ ಬೆಳಗ್ಗೆ ಸುಪ್ರಭಾತ, ವೇದಘೋಷ, ಕಾಕಡಾರತಿ ನಡೆಯಿತು. ಮೂರು ದಿನಗಳವರೆಗೆ ಸ್ವಯಂಭೂ ಸಿದ್ಧಿವಿನಾಕನಿಗೆ ಹಾಗೂ ಅನ್ನಪೂರ್ಣ ದೇವಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಪೂಜೆ, ಲೋಕಲ್ಯಾಣಾರ್ಥವಾಗಿ ಕ್ಷಿಪ್ರ ಗಣಪತಿ ಹೋಮ, ಶ್ರೀ ಶಾಂತಾನAದರ ಭಾವಚಿತ್ರಕ್ಕೆ ಮಹಾಮಂಗಳಾರತಿ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮಂಗಳವಾರ ಗೋಪಾಳ ಕಾವಲಿ ಹಾಗೂ ಅವಭೃತ ಸ್ನಾನದ ಮೂಲಕ ಮೂರು ದಿನಗಳ ಆರಾಧನೆಗೆ ತೆರೆ ಎಳೆಯಲಾಯಿತು. ಸಿಂಧನೂರ ಅಂಬಾ ಮಠದ ಬ್ರಹ್ಮಾನಂದ ಕನಕಗಿರಿ, ಶ್ರೀ ದೇವಿದಾಸ ಭಟ್ಟ ಕನಕಗಿರಿ, ಶ್ರೀ ಮೃತ್ಯುಂಜಯ ಮಹಾರಾಜ, ಶ್ರೀ ಗಜಾನನ ಮಹಾರಾಜ, ಶ್ರೀ ಗಂಗಾಧರ ಮಹಾರಾಜ, ದಾವಣಗೆರೆ ವಿವಿಯ ಸಹ ಪ್ರಾಧ್ಯಾಪಕ ಡಾ.ಭೀಮಾಶಂರ ಜೋಷಿ, ಶ್ರೀಪಾದಭಟ್ಟ ಜೋಷಿ, ದತ್ತಂಭಟ್ಟ ಜೋಷಿ, ಗಿರೀಶ ಭಟ್ಟ ಜೋಷಿ, ಶಿವಭಟ್ಟ ಜೋಷಿ, ನಾರಾಯಣರಾವ ಕುಲಕರ್ಣಿ, ಕೃಷ್ಣಾ ಕುಲಕರ್ಣಿ, ವಿನಾಯಕ ಗಂವಾರ ಇತರರಿದ್ದರು.