ಆರಬೋಳ-ಆನೆಗುಂದಿ ಮಧ್ಯೆ ಪೈಪೋಟಿ

Published on

ಶಹಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಜು.21ರಂದು ನಡೆಯುವ ಚುನಾವಣೆಗೆ ಅಖಾಡ ಸಿದ್ಧವಾಗಿದ್ದು, ಪ್ರತಿಷ್ಠಿತ ಮನೆತನದ ಇಬ್ಬರ ನಡುವೆ ಜರ‍್ದಾರ್ ಪೈಪೋಟಿ ಬಿದ್ದಿದೆ.

ತಾಲೂಕಿನ ವೀರಶೈವ ಲಿಂಗಾಯತರ ಮನೆ-ಮನಗಳಲ್ಲಿ ಎಂಟ್ಹತ್ತು ದಿನಗಳಿಂದ ಈ ಚುನಾವಣೆಯz್ದೆÃ ಚರ್ಚೆ. ಹೇಗಾಗಿದೆ ಎಂದರೆ ಸಾರ್ವತ್ರಿಕ ಚುನಾವಣೆಗೂ ಮಿರಿಸುವಷ್ಟು ಪ್ರತಿಷ್ಠೆ ಕಣವಾಗಿ ಮಾರ್ಪಟಿದೆ.

ಅಧ್ಯಕ್ಷ ಸ್ಥಾನ ಹೊರತುಪಡಿಸಿ ಉಳಿದ 20 ಕಾರ್ಯಕಾರಿ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಅಧ್ಯಕ್ಷ ಗಾದಿಗೂ ಅವಿರೋಧ ಆಯ್ಕೆ ಮಾಡುವ ನಿಟ್ಟಿನಲ್ಲಿ ಶತಪ್ರಯತ್ನ ನಡೆದರೂ ಒಮ್ಮತ ಮೂಡದ್ದರಿಂದ ಚುನಾವಣೆಗೆ ಸೈ ಎನ್ನಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಪ್ರತಿಷ್ಠಿತ ಆರಬೋಳ ಮತ್ತು ಆನೆಗುಂದಿ ಮನೆತನದ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಸಿದ್ದಣ್ಣ ಚಂದ್ರಶೇಖರ ಆರಬೋಳ, ಮಹೇಶಚಂದ್ರ ಚಂದ್ರಶೇಖರ ಆನೆಗುಂದಿ ನಾಮಪತ್ರ ಸಲ್ಲಿಸಿ ಅಖಾಡ ರಂಗೇರಿಸಿದ್ದಾರೆ.

ಯಾದಗಿರಿ ಜಿಲ್ಲೆಯ ವಾಣಿಜ್ಯ ನಗರಿ ಎಂದೇ ಕರೆಯಲ್ಪಡುವ ಶಹಾಪುರ ತಾಲೂಕಿನಲ್ಲಿ ಈ ಸಮಾಜ ಮಾದರಿಯಾಗಿದೆ. ಇಂತಹ ಕಡೆ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ಇಡೀ ಜಿಲ್ಲೆಯ ವೀರಶೈವ ಲಿಂಗಾಯತರಲ್ಲಿ ಬಹುಚರ್ಚಿತ ವಿಷಯವಾಗಿ ಪರಿಣಮಿಸಿದೆ.

752 ಸದಸ್ಯರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ವಾರದಿಂದ ತಾಲೂಕಿನ ಪ್ರತಿ ಮನೆಗೆ ಇಬ್ಬರು ಅಭ್ಯರ್ಥಿಗಳು ಬೆಂಬಲಿಗರೊAದಿಗೆ ತೆರಳಿ ಮತಯಾಚನೆ ಮಾಡುತ್ತಿದ್ದು, ಯಾರನ್ನು ಗೆಲ್ಲಿಸಬೇಕೆಂಬ ಗೊಂದಲ ಅನೇಕರಲ್ಲಿ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net