

ಚಿಕ್ಕಮಗಳೂರು: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಮೊದಲು ನಿಯೋಜಿಸಿದ್ದ ಗ್ರಾಮದಲ್ಲೇ ಹಮ್ಮಿಕೊಳ್ಳಬೇಕು ಎಂದು ಡಿಎಸ್‌ಎಸ್ ಮುಖಂಡರುಗಳು ಬುಧವಾರ ಕ್ಷೇತ್ರ ಶಿಕ್ಷ ಣಾಧಿಕಾರಿ ಎಚ್.ಸಿ.ರವೀಶ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್, ಕರ್ತಿಕೆರೆ ಕ್ಲಸ್ಟರ್ ಮಟ್ಟದ ೨೦೨೪-೨೫ನೇ ಸಾಲಿನ ಕಾರಂಜಿ ಆರದವಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿತ್ತು. ಆದರೆ ಶಾಲೆಯ ಶಿಕ್ಷಕರು ಆಕಸ್ಮಿಕವಾಗಿ ಮೃತರಾದ ಹಿನ್ನೆಲೆ ಪ್ರತಿಭಾ ಕಾರಂಜಿ ರದ್ದುಗೊಳಿಸಲಾಗಿತ್ತು ಎಂದರು.
ಅದರAತೆ ಶಿಕ್ಷಣ ಇಲಾಖೆಯ ಲಾಟರಿ ಮುಖಾಂತರ ಪ್ರತಿಭಾ ಕಾರಂಜಿಯನ್ನು ಆರದವಳ್ಳಿಯಲ್ಲಿ ನಡೆಸಲು ತೀರ್ಮಾನಿಸಿದ್ದು ಇದೀಗ ಕಾರಂಜಿ ಕಾರ್ಯಕ್ರಮವನ್ನು ಆರದವಳ್ಳಿ ಗ್ರಾಮದಿಂದ ಬೇರೆಡೆ ಆಚರಿಸಲು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.
ಪ್ರಸ್ತುತ ಆರದವಳ್ಳಿ ಸರ್ಕಾರಿ ಶಾಲೆಯಲ್ಲಿ ದಲಿತ ಕುಟುಂಬದ ಮಕ್ಕಳು ಅಭ್ಯಾಸಿಸುತ್ತಿರುವ ಹಿನ್ನೆಲೆ ಕಾರಂಜಿ ಕಾರ್ಯಕ್ರಮ ಬೇರೆಡೆ ಸ್ಥಳಾಂತರಿಸಲಾಗಿದೆ ಎಂಬ ಅನುಮಾನ ಮೂಡುತ್ತಿದೆ. ಹೀಗಾಗಿ ಶಾಲೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಶಿಕ್ಷಕರನ್ನು ವಾಪಸ್ ಆರದವಳ್ಳಿ ಶಾಲೆಗೆ ನಿಯೋಜಿಸಿ ಆ ಗ್ರಾಮದಲ್ಲೇ ಪ್ರತಿಭಾ ಕಾರಂಜಿ ಆಚರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ತಾಲೂಕು ಮಹಿಳಾ ಸಂಘಟನಾ ಸಂಚಾಲಕಿ ಶಿಲ್ಪ ರಮೇಶ್, ವಿಭಾಗೀಯ ಸಂಚಾಲಕ ಟಿ.ಎಲ್.ಗಣೇಶ್, ಆರದವಳ್ಳಿ ಶಾಲೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಮೇಘನಾ, ಮುಖಂಡರಾದ ರಜನಿಕಾಂತ್ ಉಪಸ್ಥಿತರಿದ್ದರು.