ಆರಗ ಭಾಗದಲ್ಲಿ ಕಾಡಾನೆ ಪ್ರತ್ಯಕ್ಷ

01 TTH 01
ತೀರ್ಥಹಳ್ಳಿ ತಾಲೂಕಿನ ಆರಗ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಕಾಡಾನೆ.
Published on

ತೀರ್ಥಹಳ್ಳಿ: ಭದ್ರಾ ಹಿನ್ನೀರು ಪ್ರದೇಶದಿಂದ ಶನಿವಾರ ಬಂದಿರುವ ಕಾಡಾನೆಯೊಂದು ಆರಗ ಭಾಗದಲ್ಲಿ ಕಾಣಿಸಿಕೊಂಡಿದೆ. ಇದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ.

ಭಾನುವಾರ ಮುಂಜಾನೆ 5.30ಕ್ಕೆ ಗುಡ್ಡೇಕೊಪ್ಪದಲ್ಲಿರುವ ಶಾಸಕ ಆರಗ ಜ್ಞಾನೇಂದ್ರ ನಿವಾಸದ ಎದುರಿನಲ್ಲಿಯೇ ಮುಖ್ಯ ರಸ್ತೆಯಲ್ಲಿ ಹಾದುಹೋಗಿದೆ. ನಂತರ ಆರಗದ ಜನವಸತಿ ಪ್ರದೇಶದಲ್ಲಿ ಸುತ್ತಾಡಿದ್ದು ಭಾನುವಾರ ಮಧ್ಯಾಹ್ನದ ವೇಳೆಗೆ ಬೀಸು ಗ್ರಾಮದ ಕಾಡಿನಲ್ಲಿ ಸೇರಿಕೊಂಡಿದೆ. ಮುಡುಬ ಬಳಿ ನದಿ ದಾಟಿ ಬಂದಿದೆ ಎನ್ನಲಾಗಿದೆ.

ಶನಿವಾರ ಮಧ್ಯಾಹ್ನದಿಂದ ಆರಗ ಭಾಗದ ಪಟಮಕ್ಕಿ, ಕಲ್ಗುಂಡಿ ಭಾಗದಲ್ಲಿ ಸುಮಾರು 60-70 ಕಿ.ಮೀ. ದೂರ ಕ್ರಮಿಸಿದೆ. ಆನೆಯ ಜಾಡನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳು ಹಿಂಬಾಲಿಸಿಕೊಂಡು ಹೋಗುತ್ತಿದ್ದಾರೆ. ಆರಗದಲ್ಲಿ ಸಲಗವನ್ನು ನೋಡಲು ಸೇರಿದ್ದ ಜನರ ಗುಂಪನ್ನು ನೋಡಿ ಸಿಟ್ಟಿಗೆದ್ದ ಆನೆ ಜನರತ್ತ ಧಾವಿಸಿದ್ದು, ಜನರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಲಗವನ್ನು ರೇಗಿಸಿದರೆ ಅಪಾಯ ಇರುವ ಕಾರಣ ಶಾಂತವಾಗಿ ಭದ್ರಾ ಹಿನ್ನೀರ ಪ್ರದೇಶಕ್ಕೆ ಓಡಿಸುವ ಸಲುವಾಗಿ ಶನಿವಾರದಿಂದಲೂ ಪ್ರಯತ್ನಿಸುತ್ತಿದ್ದೇವೆ. ತೋಟಗಳ ನಡುವೆ ಹಾದು ಹೋಗಿದ್ದರೂ ಯಾವುದೇ ಹಾನಿ ಮಾಡಿಲ್ಲ. ಆನೆ ಆಹಾರಕ್ಕೂ ಒಂದೆಡೆ ನಿಲ್ಲದೆ ಸಾಗುತ್ತಿರುವುದು ಆತಂಕಕ್ಕೆ ಕಾರಣ ಎಂದು ಎಸಿಎ್ ಮಧುಸೂದನ್ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net