ಆಯೋಗ ಖಾಯಂಗೊಳಿಸಿ

17Ravig6_Web
ಬೆಳಗಾವಿ ಜಿಲ್ಲಾ ಗ್ರಾಹಕರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಆವರಣದಲ್ಲಿ ಪ್ರತಿಭಟಿಸಲಾಯಿತು. ಎನ್.ಆರ್.ಲಾತೂರ, ಅಣ್ಣಾಸಾಹೇಬ ಘೋರ್ಪಡೆ, ಮಾರುತಿ ಕಾಮನಾಚೆ, ವೈ.ಕೆ.ದಿವಟಿ, ಪ್ರಿಯಾಂಕಾ ಕಾಂಬಳೆ, ಫರೀದಾ ದೇಸಾಯಿ, ಎಂ.ಎಸ್.ಮಸಗುಪ್ಪಿ ಇತರರಿದ್ದರು.
Published on

ಬೆಳಗಾವಿ: ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಖಾಯಂ ಸಂಚಾರಿ ಪೀಠಕ್ಕಾಗಿ ಜಿಲ್ಲಾ ಗ್ರಾಹಕರ ಆಯೋಗದ (ನ್ಯಾಯಾಲಯ) ಕಟ್ಟಡವನ್ನು ಆಯ್ಕೆ ಮಾಡುವ ಹಾಗೂ ಹೆಚ್ಚುವರಿ ಗ್ರಾಹಕರ ಆಯೋಗವನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲಾ ಗ್ರಾಹಕರ ಸಂಘದಿಂದ ಜಿಲ್ಲಾಡಳಿತದ ಮೂಲಕ ಗುರುವಾರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠವನ್ನು ಬೆಳಗಾವಿಯಲ್ಲಿ ಸ್ಥಾಪಿಸುವ ಕುರಿತು ಈಗಾಗಲೇ ಶಿಫಾರಸ್ಸು ಮಾಡಲಾಗಿದೆ. ಬೇರೆಡೆ ಸ್ಥಾಪಿತಗೊಂಡರೆ, ಈಗಾಗಲೇ ಹಿರಿಯ ನಾಗರಿಕರು ಸಾಕಷ್ಟು ಸಂಖ್ಯೆಯಲ್ಲಿ ವ್ಯಾಜ್ಯಗಳನ್ನು
ದಾಖಲಿಸಿದ್ದರಿಂದ ಸ್ಥಳ ದೂರಾದರೆ ಅವರಿಗೆ ತೊಂದರೆಯಾಗುತ್ತದೆ ಎಂದರು.

ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚುವರಿ ಗ್ರಾಹಕರ ಆಯೋಗಕ್ಕೆ - ನ್ಯಾಯಾಲಯದ ಪ್ರತ್ಯೇಕ ಕೊಠಡಿ, ಸಿಬ್ಬಂದಿ ಕೊರತೆ, ಹಾಗೂ ಮೂಲ ಸೌಲಭ್ಯಗಳ ಕೊರತೆಯಿಂದ ತೊಂದರೆಯಾಗುತ್ತದೆ. ಆದ್ದರಿಂದ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಖಾಯಂ ಸಂಚಾರಿ ಪೀಠಕ್ಕಾಗಿ ಜಿಲ್ಲಾ ಗ್ರಾಹಕರ ಆಯೋಗದ ಕಟ್ಟಡವನ್ನು ಆಯ್ಕೆ ಮಾಡಬೇಕು. ಹೆಚ್ಚುವರಿ ಗ್ರಾಹಕರ ಆಯೋಗವನ್ನು ಖಾಯಂಗೊಳಿಸಿ, ಪ್ರತ್ಯೇಕ ನ್ಯಾಯಾಲಯ ಕೊಠಡಿ, ಸಿಬ್ಬಂದಿ, ಮೂಲ ಸೌಲಭ್ಯಗಳನ್ನು ಒದಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ವಕೀಲರಾದ ಬೆಳಗಾವಿ ಜಿಲ್ಲಾ ಗ್ರಾಹಕರ ಸಂಘದ ಅಧ್ಯಕ್ಷ ಎನ್.ಆರ್.ಲಾತೂರ, ಅಣ್ಣಾಸಾಹೇಬ ಘೋರ್ಪಡೆ, ಮಾರುತಿ ಕಾಮನಾಚೆ, ವೈ.ಕೆ.ದಿವಟಿ, ಪ್ರಿಯಾಂಕಾ ಕಾಂಬಳೆ, ಫರೀದಾ ದೇಸಾಯಿ, ಎಂ.ಎಸ್.ಮಸಗುಪ್ಪಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net