ಆಯುಷ್ಮಾನ್ ಭಾರತ್ ಸರ್ವರ ಆರೋಗ್ಯಕ್ಕೆ ಪೂರಕ

ಕಿಕ್ಕೇರಿ ಕೆಪಿಎಸ್ ಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ಬುಧವಾರ ಮಕ್ಕಳಿಗಾಗಿ ಆಯೋಜಿಸಿದ್ದ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ, ಅಂಗಾಂಗ ಕಸಿ ಯೋಜನೆ ರಸಪ್ರಶ್ನೆ ಕಾರ್ಯಕ್ರಮವನ್ನು ಉಪಪ್ರಾಂಶುಪಾಲ ಬಸವರಾಜಪ್ಪ ಉದ್ಘಾಟಿಸಿದರು. ಡಾ. ಸೌಜನ್ಯಾ ಎನ್ ವಾಳ್ಮೆ, ಶಿವಮ್ಮ, ಮೇಘನಾ, ಬಿ.ಎನ್.ಪರಶಿವಮೂರ್ತಿ ಹಾಜರಿದ್ದರು.
30-kkr2(8-23
Published on

ಕಿಕ್ಕೇರಿ: ಆರೋಗ್ಯ ಸಮಸ್ಯೆಗೆ ನೆರವು ನೀಡಲು ಆಯುಷ್ಮಾನ್ ಭಾರತ್ ಯೋಜನೆ ಸಹಾಯಕವಾಗಿದೆ ಎಂದು ಡಾ. ಸೌಜನ್ಯಾ ಎನ್. ವಾಳ್ಮೆ ತಿಳಿಸಿದರು.


ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ತಾಲೂಕು ಆರೋಗ್ಯ ಕೇಂದ್ರ, ಹಿರಿಕಳಲೆ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಬುಧವಾರ ಮಕ್ಕಳಿಗಾಗಿ ಆಯೋಜಿಸಿದ್ದ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ, ಅಂಗಾಂಗ ಕಸಿ ಯೋಜನೆ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿ, 2018ರಲ್ಲಿ ಆರಂಭವಾದ ಯೋಜನೆಯಿಂದ ಬಿಪಿಎಲ್ ಕಾರ್ಡುದಾರರಿಗೆ ವಾರ್ಷಿಕವಾಗಿ 5 ಲಕ್ಷ ರೂ. ಉಚಿತ ಚಿಕಿತ್ಸೆ, ಎಪಿಎಲ್ ಕಾರ್ಡುದಾರರಿಗೆ 1.5 ಲಕ್ಷ ರೂ. ಚಿಕಿತ್ಸಾ ವೆಚ್ಚ (ಶೇ.30) ಲಭ್ಯವಿರುತ್ತದೆ. ಪ್ರಾಥಮಿಕ ಹಂತದ ಸರಳ ವಿವಿಧ 1650 ಚಿಕಿತ್ಸೆಗೆ, ದ್ವಿತೀಯ, ಕ್ಲಿಷ್ಟಕರವಾದ 251, ತೃತೀಯ ಹಂತದ 934, ತುರ್ತು ಚಿಕಿತ್ಸೆಯ 171 ಚಿಕಿತ್ಸೆಗಳಿಗೆ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.


ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ ಮಾತನಾಡಿ, ಅಂಗಾಂಗ ಕಸಿ ಯೋಜನೆ, ಎಂ.ಬಿ ಹಾಗೂ ಎ.ಆರ್.ಕೆ. ಕಾರ್ಡುಗಳನ್ನು ಗ್ರಾಮ ಒನ್, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುವುದು. ತುರ್ತು ಚಿಕಿತ್ಸೆಯನ್ನು ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಪಡೆಯಬಹುದಾಗಿದ್ದು, ಗೊಂದಲವಿದ್ದಲ್ಲಿ ಇಲಾಖೆಯವರನ್ನು ಸಂಪರ್ಕಿಸಬಹುದಾಗಿದೆ. ಮಕ್ಕಳಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಪ್ರಮುಖ ಗುರಿಯಾಗಿದೆ ಎಂದು ಮಾಹಿತಿ ನೀಡಿದರು.
ರಸಪ್ರಶ್ನೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನ, ಪ್ರಶಂಸನಾ ಪತ್ರ ವಿತರಿಸಲಾಯಿತು. ಉಪ ಪ್ರಾಂಶುಪಾಲ ಬಸವರಾಜಪ್ಪ, ಆರೋಗ್ಯ ಸಹಾಯಕಿ ಮೇಘನಾ, ರಶ್ಮಿ, ಮಂಜುಳಾ, ಶಿಕ್ಷಕ ಬಿ.ಎನ್.ಪರಶಿವಮೂರ್ತಿ, ಮಹ್ಮದ್ ರಸೂತ್, ನಂದಿನಿ, ಲೀಲಾವತಿ, ರಾಗಿಣಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net