

ವಿಜಯಪುರ: ಆಯುಷ್ ಎಂಡಿ ಹಾಗೂ ಎಂ ಎಸ್ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಕೇಂದ್ರ ಸರ್ಕಾರ, ಕೇಂದ್ರ ಆಯುಷ್ ಇಲಾಖೆ ಅನುಮತಿಸಿದೆ. ಹಾಗಾಗಿ ವಿಜಯಪುರದಲ್ಲಿ ಆಯುಷ್ ಫೆರಡೆಷನ್ ಆಫ್ ಇಂಡಿಯಾದ ಸದಸ್ಯರು ಅಭಿನಂದನೆ ಸಲ್ಲಿಸಿದ್ರು. ನಗರದ ಡಿಸಿ ಕಚೇರಿ ಬಳಿ 100ಕ್ಕೂ ಹೆಚ್ಚು ವೈದ್ಯರು ಸೇರಿ, ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಅಭಿನಂದನಾ ಪತ್ರ ಸಲ್ಲಿಸಿದ್ರು. ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಆಯುರ್ವೇದಿಕ್ ಚಿಕಿತ್ಸಾ ಪದ್ಧತಿಯಲ್ಲಿ ಹಲವಾರು ಕಾಯಿಲೆಗಳನ್ನು ಸರಳವಾಗಿ ಗುಣಪಡಿಸಬಹುದಾಗಿದೆ. BAMS, BHMS, UNANI ವೈದ್ಯರು ಹಳ್ಳಿಗಳಲ್ಲಿ ಕಡಿಮೆ ಶುಲ್ಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಆಯುಷ್ ಇಲಾಖೆ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಿದ್ದು ಅತ್ಯಂತ ಸಂತಸಕರವಾಗಿದೆ ಎಂದು ವೈದ್ಯರು ತಿಳಿಸಿದ್ರು. ಅಭಿನಂದನೆ ಸಲ್ಲಿಕೆ ವೇಳೆ. ಜಿಲ್ಲಾಧ್ಯಕ್ಷ ಡಾ. ಎ ವಿ ಢಾಣಕಶಿರೂರ, ಕಾರ್ಯದರ್ಶಿ ಡಾ. ರಾಜೇಂದ್ರ ಸಂಕನ್ನವರ, ಡಾ. ಬಾಬುಗೌಡ ಕುಚನೂರ, ಡಾ. ಶಶಿಧರ ಹೊಟ್ಟಿ, ಡಾ. ವಾಸು ಢಗೆ, ಡಾ. ಸಂಜೂ ಶೀಳಿನ, ಡಾ. ಅಶೋಕ ವಾಲಿ ಸೇರಿದಂತೆ ಇತರ ವೈದ್ಯರು ಭಾಗವಹಿಸಿದ್ದರು.