ಆಯುಷ್ ವೈದ್ಯ ಪದ್ಧತಿಗಳಿಗೆ ಅಗ್ರ ಸ್ಥಾನ ಸಿಗಲಿ

29 Dwd 6
Published on

ಧಾರವಾಡ: ಭಾರತೀಯ ಆಯುಷ್ ವೈದ್ಯ ಪದ್ಧತಿಗಳಿಗೆ ಅಗ್ರಸ್ಥಾನ ಸಿಗಬೇಕು. ದೇಶೀಯವಾಗಿರುವ ಈ ಚಿಕಿತ್ಸೆ ಪದ್ಧತಿಗಳಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಭಾರತದಲ್ಲಿ ಆಯುಷ್ ವೈದ್ಯಕೀಯ ಚಿಕಿತ್ಸೆಗಳು ಪ್ರಧಾನವಾಗಬೇಕು ಎಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಸಂಗಮೇಶ ಕಲಹಾಳ ಹೇಳಿದರು.

ನಗರದ ಬಿ.ಡಿ. ಜತ್ತಿ ಹೋಮಿಯೋಪಥಿ ಮೆಡಿಕಲ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಚೀನಾದಲ್ಲಿ ಆಕ್ಯುಪಂಕ್ಚರ್ ಮತ್ತು ಆಕ್ಯುಪ್ರೆಷರ್ ವೈದ್ಯ ಪದ್ಧತಿಗಳು ಪ್ರಧಾನವಾಗಿವೆ. ಅದೇರೀತಿ ಭಾರತದಲ್ಲಿಯೂ ಆಯುಷ್ ಪದ್ಧತಿಗಳಿಗೆ ಮೊದಲ ಸ್ಥಾನ ಸಿಗಬೇಕು. ಉಳಿದ ವೈದ್ಯಪದ್ಧತಿಗಳು ಪರ್ಯಾಯವಾಗುವ ರೀತಿಯಲ್ಲಿ

ಬೆಳೆಯಬೇಕು. ಆಯುಷ್ ಮೆಡಿಕಲ್ ಕಾಲೇಜ್​ಗಳು ಸಂಶೋಧನೆ, ಅಧ್ಯಯನಗಳ ಮೂಲಕ ಆಯುಷ್ ಮಹತ್ವವನ್ನು ಜನತೆಗೆ ತಿಳಿಸಬೇಕು ಎಂದರು. ಮೇ 31ರಂದು ಸೇವಾ ನಿವೃತ್ತಿ ಹೊಂದಲಿರುವ ಡಾ. ಸಂಗಮೇಶ ಕಲಹಾಳ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಬಿ.ಡಿ. ಜತ್ತಿ ಹೋಮಿಯೋಪಥಿ ಕಾಲೇಜ್ ಪ್ರಾಚಾರ್ಯ ಡಾ. ಆನಂದ ಕುಲಕರ್ಣಿ, ಸಿ.ಬಿ. ಗುತ್ತಲ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಶಿಧರ ಹೊಂಬಳ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net