ಬಳ್ಳಾರಿ : ರಾಜ್ಯ ಸರ್ಕಾರ ಪ್ರಸ್ತಕ ಸಾಲಿನ ಆಯುಷ್ ಇಲಾಖೆಯ ವರ್ಗಾವಣೆಯ ಅಂತಿಮ ಪಟ್ಟಿ ಬಿಡುಗಡೆ ವಿಳಂಬದಿಂದ ವೈದ್ಯರು ಹಾಗೂ ಅಧಿಕಾರಿಗಳು ಬೇಸರ ಹೊರಹಾಕಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಏಳು ವರ್ಷಕ್ಕಿಂತ ಅಧಿಕ ಸೇವೆ ಸಲ್ಲಿಸಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆಯ ಅಧಿಕಾರಿಗಳು ವರ್ಗಾವಣೆಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಆದರೆ, ಸರ್ಕಾರ ಅಂತಿಮ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸದೆ ಮುಂದೆ ತಳ್ಳುತ್ತ ಬಂದಿರುವುದು ಬೇಸರ ಮೂಡಿಸಿದೆ.
ಆಯುಷ್ ಇಲಾಖೆಯಲ್ಲಿ ಆರ್ಯುವೇದ, ಹೋಮಿಯಪತಿ, ಯುನಾನಿ, ಪ್ರಕೃತಿ ಚಿಕಿತ್ಸೆ ಹಾಗೂ ಯೋಗಾ ಸೇರಿದಂತೆ ಐದು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯಧಿಕಾರಿಗಳು, ಸ್ಟಾಫ್ ನರ್ಸ್, ಫಾರ್ಮಸ್ಟಿಕ್ಸ್, ಡಿ ಗ್ರೂಪ್, ಸಹಾಯಕ ಆಡಳಿತಧಿಕಾರಿಗಳು ಸೇರಿದಂತೆ ಒಟ್ಟಾರೆ 500ಕ್ಕೂ ಅಧಿಕ ಅಧಿಕಾರಿಗಳು ಅರ್ಜಿ ಸಲ್ಲಿಸಿ ವರ್ಗಾವಣೆಗಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಗಂಭೀರ ಮಾರಣಾಂತಿಕ ಕಾಯಿಲೆ, 2 ವರ್ಷದೊಳಗೆ ವಯೋ ನಿವೃತ್ತಿ ಹೊಂದುವಂತ, ವಿಧವೆಯರಿಗೆ , ಶೇ. 40%ಕ್ಕಿಂತ ಹೆಚ್ಚಿನ ವಿಶೇಷ ಚೇತನರು ಹಾಗೂ ಪತಿ - ಪತ್ನಿ ಬೇರೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ, ಎ ಗೆ ಮೂರು ವರ್ಷ, ಬಿ ಗೆ ನಾಲ್ಕು ವರ್ಷ ಹಾಗೂ ಸಿ ವೃಂದ ಅಧಿಕಾರಿಗಳಿಗೆ ಐದು ವರ್ಷ ಸೇವೆ ಸಲ್ಲಿಸಿದರೆ ವರ್ಗಾಣೆಗೆ ಅರ್ಜಿ ಸಲ್ಲಿಸುವ ಅವಕಾಶವಿದೆ ಎಂದು ವರ್ಗಾವಣೆ ಕಾಯ್ದೆ ನಿಯಮದ ಆದೇಶದಲ್ಲಿದೆ. ಸದ್ಯ ಇದರಲ್ಲಿ ಪತಿ, ಪತ್ನಿ ಬೇರೆ ಜಿಲ್ಲೆಯಲ್ಲಿ ಕಾರ್ಯ ಹಾಗೂ ಎ, ಬಿ ಹಾಗೂ ಸಿ ವೃಂದದ ಅಧಿಕಾರಿಗಳು ಒಂದೇ ಜಿಲ್ಲೆಯಲ್ಲಿ ಏಳು ವರ್ಷಕ್ಕಿಂತ ಅಧಿಕ ಸೇವೆ ಸಲ್ಲಿಸಿದವರೆ ಹೆಚ್ಚಿನ ಜನರಿದ್ದಾರೆ.
ವರ್ಗಾವಣೆಯಿಂದ ಅನುಕೂಲ : ಕುಟುಂಬ ಹಾಗೂ ಸ್ವಂತ ಊರಿನಿಂದ ಹಲವು ವರ್ಷಗಳಿಂದ ದೂರ ಇರುವುದರಿಂದ ಈ ವರ್ಗಾವಣೆಯಿಂದ ಸ್ವಂತ ಊರಿಗೆ ತೆರಳಿ ತಂದೆ ತಾಯಿಂದಿರ ಆರೋಗ್ಯದ ಬಗ್ಗೆ ಗಮನಹರಿಸುವುದು. ಪತ್ನಿ ಹಾಗೂ ಮಕ್ಕಳೂಡನೆ ಬೆಸೆಯುವುದರಿಂದ ಮಾನಸಿಕ ಒತ್ತಡ ನಿವಾರಿಸುವುದು. ಕಡಿಮೆ ವೇತನ ಸಿಬ್ಬಂದಿಗೆ ಆರ್ಥಿಕತೆ ಸುಧಾರಿಸಲು ಸಹಕಾರಿಯಾಗಲಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುವ ಪತಿ, ಪತ್ನಿಯರು ಒಂದಡೆ ಸೇರಿ ಕಾರ್ಯ ನಿರ್ವಹಿಸುವುದರಿಂದ ಕೆಲ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು. ಇತ್ತೀಚೆಗೆ ಬೇರೆ ಬೇರೆ ಕಡೆ ಕಾರ್ಯ ನಿರ್ವಹಿಸುತ್ತಿವುದರಿಂದ ಹಲವರು ಪತಿ, ಪತ್ನಿವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಅಂತಿಮ ಪಟ್ಟಿ ಏಕೆ ವಿಳಂಬ : ವಿವಿಧ ಜಿಲ್ಲೆಗಳಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಾವಣೆಗೊಳಿಸುವುದರಿಂದ ಅಲ್ಲಿ ಖಾಲಿ ಉಳಿಯಬಹುದು. ಸರ್ಕಾರದಿಂದ ನೂತನ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಕೆಲ ವರ್ಷಗಳೆ ಕಳೆಯಬಹುದು. ಇದರಿಂದ ಅಲ್ಲಿನ ಜನ ಸಾಮಾನ್ಯರಿಗೆ ಸಮಸ್ಯೆ ಎದುರಾಗಲಿದೆ ಎಂಬ ಉದ್ದೇಶವಿದೆ. ಕ.ಕ. ಭಾಗದ ಕಚೇರಿಗಳಲ್ಲಿ ನೇಮಕಾತಿ ಹೊಂದಿರುವ ಅಧಿಕಾರಿಗಳಿಗೆ ಕನಿಷ್ಠ 10 ವರ್ಷದವರೆಗೆ ಕ.ಕ. ಪ್ರದೇಶ ಹೊರತುಪಡಿಸಿ ಇತರೆ ಸ್ಥಳಕ್ಕೆ ವರ್ಗಾವಣೆ ಮಾಡಬಾರದು. ಆದರೆ, ಕ.ಕ. ಭಾಗದಲ್ಲಿ ಮಾತ್ರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಿದೆ.
ಕೋಟ್… ಸರ್ಕಾರ ಅಂತಿಮ ಪಟ್ಟಿ ಬಿಡುಗಡೆಗೊಳಿಸದೆ ವಿಳಂಬ ಮಾಡುತ್ತಿದೆ. ಕೂಡಲೇ ವರ್ಗಾವಣೆಗೊಳಿಸಿದರೆ ಹಲವು ಅಧಿಕಾರಿಗಳಿಗೆ ಅನುಕೂಲವಾಗಲಿದೆ.