ಆಯುರ್ವೇದದಲ್ಲಿದೆ ಎಲ್ಲ ಕಾಯಿಲೆಗಳಿಗೂ ಚಿಕಿತ್ಸೆ

ctd--0001
Published on

ಚಿತ್ರದುರ್ಗ: ಶ್ರೇಷ್ಠ ಔಷಧ, ಪುರಾತನ ಪದ್ಧತಿಯಾಗಿರುವ ಆಯುರ್ವೇದಕ್ಕೆ ಉತ್ತಮ ಭವಿಷ್ಯವಿದೆ ಎಂದು ದೇವರಾಜ ಅರಸು ಶಿಕ್ಷಣ ಸಂಸ್ಥೆ ಸಿಇಒ ಎಂ.ಸಿ. ರಘುಚಂದನ್ ಹೇಳಿದರು.

ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ಧನ್ವಂತರಿ ಜಯಂತಿ ಹಾಗೂ 10ನೇ ಆಯುರ್ವೇದ ದಿನದ ಅಂಗವಾಗಿ ಮಂಗಳವಾರ ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಕೃತಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಅಡುಗೆ ಮನೆಯಲ್ಲಿರುವ ಪ್ರತಿ ಪದಾರ್ಥದಲ್ಲೂ ಆಯುರ್ವೇದ ಅಂಶಗಳಿವೆ. ಸಾಮಾನ್ಯ ಜೀವನದಲ್ಲಿ ಆಯುರ್ವೇದ ಬೆರೆತಿದೆ. ಎಲ್ಲ ಕಾಯಿಲೆಗಳಿಗೂ ಗುಣಾತ್ಮಕ ಚಿಕಿತ್ಸೆ ಲಭ್ಯವಿದೆ ಎಂದರು.

ಅಳಗವಾಡಿ ಆಯುಷ್‌ಆರೋಗ್ಯ ಮತ್ತು ಕ್ಷೇಮ ಮಂದಿರದ ಆಡಳಿತ ವೈದ್ಯಾಧಿಕಾರಿ ಡಾ.ಜಿ.ಬಿ. ನಾರದಮುನಿ ಮಾತನಾಡಿ, ಆಯುರ್ವೇದದ ಅರಿವು ಇರುವವರಿಗೆ ರೋಗದ ಭಯ ಇರುವುದಿಲ್ಲ ಎಂದರು.

ಇದಕ್ಕೂ ಮೊದಲು ಆಯುರ್ವೇದ ದಿನದ ಅಂಗವಾಗಿ ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ ನಾಗಸಮುದ್ರ, ಸಂಸ್ಥೆ ಡೀನ್ ಡಾ.ಬಿ.ಸಿ. ಅನಂತರಾಮು, ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಬಿ.ನವಾಜ್ ಅಹಮದ್, ಆದ್ಯ ಕಾಲೇಜ್ ಆಫ್ ಫಾರ್ಮಸಿ ಪ್ರಾಚಾರ್ಯ ಡಾ.ಆರ್.ಕೆ. ಮಹಮದ್‌ಮುತಾಹರ್, ಎಸ್‌ಎಲ್‌ವಿ ಕಾಲೇಜ್ ಆಫ್ ನರ್ಸಿಂಗ್ ಪ್ರಾಚಾರ್ಯ ಡಾ.ಎಂ.ಎಂ. ಮಹಾಂತೇಶ್, ವೈದ್ಯಾಧಿಕಾರಿಗಳಾದ ಡಾ. ಶಿವಕುಮಾರ್, ಡಾ. ರೇಷ್ಮಾ, ಡಾ. ಮಂಜುಳಾ, ಡಾ.ಎಂ.ಎಲ್. ನದಾಫ್, ಡಾ.ಆರ್.ಎನ್. ಕೆರೂರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net