

ಚಿಕ್ಕಮಗಳೂರು: ಆಧುನಿಕ ಭರಾಟೆಯಲ್ಲಿ ಮಾನವರು ಹಿಂದಿನ ಆಹಾರ ಪದ್ಧತಿ, ಜೀವನಶೈಲಿ ಹಾಗೂ ಆಯುರ್ವೇದ ಔಷಧೋಪಚಾರದ ವಿಧಾನಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದು ಅತಿಮುಖ್ಯ ಎಂದು ಬ್ರಹ್ಮಕುಮಾರೀಸ್ ಸಂಸ್ಥೆಯ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ ತಿಳಿಸಿದರು.
ನಗರದ ಹೌಸಿಂಗ್ ಬೋರ್ಡ್ ಸಮೀಪದ ಸರ್ಕಾರಿ ಶಾಲೆಯಲ್ಲಿ ಲೈಫ್‌ಕೇರ್ ಕ್ಲಿನಿಕ್ ವತಿಯಿಂದ ಏರ್ಪಡಿಸಿದ್ಧ ಉಚಿತ ಆಯುರ್ವೇದ ಔಷಧ ವಿತರಣೆ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನುಷ್ಯನ ನಿತ್ಯದ ಜೀವನದಲ್ಲಿ ಸಂಪಾದನೆ, ಆಸ್ತಿಗಳಿಕೆೆ ಹಾಗೂ ಕುಟುಂಬ ನಿರ್ವಹಣೆ ಹೆಚ್ಚಾದ ಕಾರಣ ಆರೋಗ್ಯದ ಕಡೆ ಹೆಚ್ಚು ಗಮನಹರಿಸದೇ ಹಂತ ಹಂತವಾಗಿ ಕುಗ್ಗುತ್ತಿದ್ದಾನೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ ಆರೋಗ್ಯದ ನಿದ್ರೆ ಕ್ಷೀಣಿಸಿ, ಅನಾರೋಗ್ಯವು ಹೆಚ್ಚಾಗುತ್ತಿದೆ ಎಂದು ಹೇಳಿದರು.
ಶಾರೀರಿಕ ಹಾಗೂ ಮಾನಸಿಕವಾಗಿ ಸದೃಢವಾಗಲು ಆಧ್ಯಾತ್ಮಕ ಕಡೆ ಹೆಚ್ಚು ಒಲವು ಹೊಂದಬೇಕು. ಕೆಟ್ಟ ಗುಣಗಳೇ ಮಾನವನ ಅಂಗಾAಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಮನಸ್ಸನ್ನು ಹತೋಟಿಗೆ ತರಲು ಆಯುರ್ವೇದದ ಜೀವನಶೈಲಿ ಹಾಗೂ ಪರಮಾತ್ಮನ ಆರಾಧಿಸುವ ಗುಣ ಬೆಳೆಸಿಕೊಂಡರೆ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಲೈಫ್‌ಕೇರ್ ಕ್ಲಿನಿಕ್‌ನ ಕೆ.ಎ.ಅನೀತ್‌ಕುಮಾರ್ ಮಾತನಾಡಿ, ಶಿತ, ಕೆಮ್ಮು, ಅಲರ್ಜಿ, ಅಸ್ತಮಾ ಸೇರಿದಂತೆ ಇನ್ನಿತರೆ ಶ್ವಾಸಕೋಶÀದ ತೊಂದರೆಗಳಿಗೆ ಆಯುರ್ವೇದದಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ವರ್ಷಕ್ಕೊಮ್ಮೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬಾಳೆಹಣ್ಣಿನಲ್ಲಿ ಔಷಧ ಬೆರೆಸಿ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಹಣ್ಣು ಸೇವಿಸುವ ಮೊದಲು ರಾತ್ರಿ ವೇಳೆ ಚಂದ್ರನ ಕಿರಣಗಳು ಹಣ್ಣಿನ ಮೇಲೆ ಬೀಳುವಂತೆ ಇಡಬೇಕು. ಮುಂಜಾನೆ ಎದ್ದಕೂಡಲೇ ಹಣ್ಣು ಸೇವಿಸಬೇಕು. ತದನಂತರ ಕರಿದ ಪದಾರ್ಥಗಳು, ಹಾಲು- ಮೊಸರು, ಮಾಂಸಸೇವನೆ, ಒಗ್ಗರಣೆ ತಿಂಡಿಗಳನ್ನು ಸೇವಿಸಬಾರದು. ಕಾಯಿಸಿದ ನೀರನ್ನು ಕುಡಿಯಬೇಕು. ರಾತ್ರಿ ೯ ಗಂಟೆಯೊಳಗೆ ಊಟ ಮಾಡಬೇಕು ಎಂದು ಸೂಚಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಸದಸ್ಯೆ ಕವಿತಾ ಶೇಖರ್, ಆಯುರ್ವೇದ ಪದ್ಧತಿ ಋಷಿಮುನಿಗಳ ಕಾಲದಿಂದ ಚಾಲ್ತಿಯಲ್ಲಿದೆ. ಆದರೆ ಇತ್ತೀಚೆಗೆ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಉಂಟಾದರೆ ತುರ್ತಾಗಿ ಮಾತ್ರೆ, ಇಂಜೆಕ್ಷನ್ ತೆಗೆದುಕೊಳ್ಳುವುದು ಸರಿಯಲ್ಲ. ಅಡುಗೆ ಮನೆಯಲ್ಲೇ ಶುಂಠಿ, ಬೆಳ್ಳುಳ್ಳಿ, ಚಕ್ಕೆಲವಂಗದಲ್ಲಿ ಔಷಧೀಯ ಗುಣಗಳಿದ್ದು ಬಳಸಿಕೊಳ್ಳುವ ರೀತಿ ತಿಳಿದಿರಬೇಕು ಎಂದರು.
ಪೂರ್ವಿಕರ ಕಾಲದಲ್ಲಿ ಆಯುರ್ವೇದಿಕ್ ಔಷಧೋಪಚಾರ ಬಹಳಷ್ಟು ಪ್ರಪಚಲಿತದಲ್ಲಿತ್ತು. ಕಾಲಕ್ರಮೇಣ ಎಲ್ಲವೂ ನಶಿಸುತ್ತಿರುವ ಪರಿಣಾಮ ಇಂದಿನ ಆಹಾರ ಪದಾರ್ಥಗಳು ವಿಷಯುಕ್ತವಾಗಿವೆ. ಇದರಿಂದ ಮಾನವ ಜನಾಂಗ ಅಲ್ಪ ಆಯುಷ್ಯದಲ್ಲೇ ಮೃತರಾಗುತ್ತಿದ್ದಾರೆ. ಹೀಗಾಗಿ ಆಯುರ್ವೇದ ಪದ್ಧತಿಯನ್ನು ಬದುಕಿನ ಅಂಗವೆAದು ತಿಳಿದು ಮುನ್ನೆಡೆದರೆ ಜೀವನ ಸಂತೋಷದಿAದ ಕೂಡಿರಲು ಸಾಧ್ಯ ಎಂದು ಹೇಳಿದರು.
ಇದೇ ವೇಳೆ ಸುಮಾರು ೫೦೦ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಔಷಧ ಮಿಶ್ರಿತ ಬಾಳೆಹಣ್ಣನ್ನು ವಿತರಿಸಲಾಯಿತು. ಜೊತೆಗೆ ವೃದ್ಧರಿಗೆ ಅನುಕೂಲವಾಗಲು ಮಧುಮೇಹ ಹಾಗೂ ಕಣ್ಣಿನ ತಪಾಸಣೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ನಾಮನಿರ್ದೇಶಿತ ಸದಸ್ಯ ಕೀರ್ತಿಶೇಟ್, ಉಪನ್ಯಾಸಕಿ ಲಾವಣ್ಯ ಮತ್ತಿತರರಿದ್ದರು.