ಆಯುರ್ವೇದ ಚಿಕಿತ್ಸಾಲಯ ಸದ್ಬಳಕೆ ಮಾಡಿಕೊಳ್ಳಿ

ಗಂಗಾವತಿ ತಾಲೂಕಿನ ಆಗೋಲಿಯಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕಟ್ಟಡವನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ಉದ್ಘಾಟಿಸಿದರು. ಜಿಲ್ಲಾ ಆಯುಷಾಧಿಕಾರಿ ಡಾ.ಪರ್ವತಗೌಡ, ವೈದ್ಯಾಧಿಕಾರಿ ಭಾನುಪ್ರಕಾಶ, ಗ್ರಾಪಂ ಅಧ್ಯಕ್ಷ ಅಮಾಜಪ್ಪ, ಸದಸ್ಯರಾದ ಹನುಮನಗೌಡ, ಬಸವರಾಜ ಕನಕಗಿರಿ ಇತರರಿದ್ದರು.

Published on

ಗಂಗಾವತಿ: ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿಯಾಗಿದ್ದು, ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

ತಾಲೂಕಿನ ಆಗೋಲಿಯಲ್ಲಿ ಆಯುಷ್ ಇಲಾಖೆ, ಜಿಪಂ ಸಹಯೋಗದಲ್ಲಿ ಶುಕ್ರವಾರ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ತಾಪಂ ಲಿಂಕ್ ಡಾಕ್ಯುಮೆಂಟ್ ಯೋಜನೆಯಡಿ 50ಲಕ್ಷ ರೂ. ವೆಚ್ಚದ ಆಯುರ್ವೇದ ಚಿಕಿತ್ಸಾಲಯ ನಿರ್ಮಿಸಲಾಗಿದೆ. ಗ್ರಾಮೀಣರು ಚಿಕಿತ್ಸಾಲಯ ಸದ್ಭಳಕೆ ಮಾಡಿಕೊಳ್ಳಿ. ಹೆಚ್ಚುವರಿ ವೈದ್ಯರು ಇತರ ಸೌಲಭ್ಯ ಒದಗಿಸಲಾಗುವುದು ಎಂದರು. ಸ್ವಾತಂತ್ರ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿದರು.

ಜಿಲ್ಲಾ ಆಯುಷಾಧಿಕಾರಿ ಡಾ.ಪರ್ವತಗೌಡ, ವೈದ್ಯಾಧಿಕಾರಿ ಡಾ.ಭಾನುಪ್ರಕಾಶ, ಗ್ರಾಪಂ ಅಧ್ಯಕ್ಷ ಅಮಾಜಪ್ಪ, ಸದಸ್ಯರಾದ ಹನುಮನಗೌಡ, ಬಸವರಾಜ ಕನಕಗಿರಿ, ಕರಿಯಪ್ಪ ಹರಿಜನ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ.ಆಗೋಲಿ, ಪ್ರಮುಖರಾದ ಮನೋಹರ ಗೌಡ ಹೇರೂರು, ಯಂಕಪ್ಪ ಹುನಗುಂದ, ಸಣ್ಣದೇವಣ್ಣ, ಸಾದಪ್ಪ, ಯಮನೂರಪ್ಪ, ತಿಮ್ಮಾರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net