

ಚಾಮರಾಜನಗರ: ನಗರಸಭೆ ನೂತನ ಆಯುಕ್ತರಾಗಿ ಎಸ್.ವಿ.ರಾಮದಾಸ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ರಾಮದಾಸ್ ಅವರು ಮಡಿಕೇರಿ ನಗರಸಭೆಯಲ್ಲಿ ಎರಡು ವರ್ಷ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲಿಂದ ಬೆಂಗಳೂರಿನ ಲಾಲ್ ಬಾಗ್‌ನ ನ ತೋಟಗಾರಿಕೆ ಇಲಾಖೆಗೆ ವರ್ಗಾವಣೆಗೊಂಡು ಮೂರು ತಿಂಗಳ ಕಾಲ ಕಾರ್ಯನಿರ್ವಹಣೆ ಮಾಡಿದ್ದಾರೆ.
ಚಾಮರಾಜನಗರಕ್ಕೆ ಶುಕ್ರವಾರ ಆಗಮಿಸಿದ ಎಸ್.ವಿ.ರಾಮದಾಸ್ ಅವರು ನಗರಸಭೆ ಪ್ರಭಾರ ಆಯುಕ್ತರಾಗಿದ್ದ ನಟರಾಜು ಅವರಿಂದ ಅಧಿಕಾರ ಸ್ವೀಕರಿಸಿದರು. ಕಂದಾಯ ವಿಭಾಗದ ಅಧಿಕಾರಿ ಶರವಣ, ಪರಿಸರ ಇಂಜಿನಿಯರ್ ಎ.ಆರ್‌ಗಿರಿಜಮ್ಮ, ಸಿಬ್ಬಂದಿ ಹಾಜರಿದ್ದರು.