ಆಯಿಷ್‌ನಿಂದ 12 ವಿಧದ ಅಂಗವೈಕಲ್ಯ ಗುರುತು

mysore
Published on

ಮೈಸೂರು: ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ 12 ರೀತಿಯ ಅಂಗವೈಕಲ್ಯವನ್ನು ಗುರುತಿಸಿದ್ದು, ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂದು ಸಂಸ್ಥೆಯ ನಿರ್ದೇಶಕಿ ಪ್ರೊ.ಎಂ.ಪುಷ್ಪಾವತಿ ತಿಳಿಸಿದರು.

ಮೈಸೂರು ಡಿಸ್ಟ್ರಿಕ್ಟ್ ಡ್ೆ ಅಸೋಸಿಯೇಷನ್, ಅಂತಾರಾಷ್ಟ್ರೀಯ ಲಯನ್ ಸಂಸ್ಥೆ 317ಜಿ, ಲಯನ್ಸ್ ಕ್ಲಬ್ ಆ್ ಮೈಸೂರು ನಿಸರ್ಗ ಮತ್ತು ಮಯೂರಿ ಸಹಯೋಗದಲ್ಲಿ ಕ್ಯಾನ್‌ಫಿನ್ ಹೋಮ್ಸ್ ಲಿಮಿಟೆಡ್ ವತಿಯಿಂದ ಸಿಎಸ್‌ಆರ್ ಉಪಕ್ರಮದಡಿ ನಗರದ ಆಯಿಷ್‌ನಲ್ಲಿ ಭಾನುವಾರ ಆಯೋಜಿಸಿದ್ದ ಶ್ರವಣ ಸಾಧನಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಆಯಿಷ್‌ಗೆ ವರ್ಷಕ್ಕೆ 73 ಸಾವಿರ ಜನರು ಭೇಟಿ ನೀಡಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಪೈಕಿ ಶ್ರವಣ ದೋಷವುಳ್ಳವರು ಅಧಿಕವಾಗಿದ್ದಾರೆ ಎಂದರು.

ಬಹಳಷ್ಟು ಮಕ್ಕಳು ಶ್ರವಣ ದೋಷದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಹೆಚ್ಚಿನವರಿಗೆ ಮಾತು ಬರುತ್ತಿಲ್ಲ. ಕೇವಲ ಸನ್ನೆಯ ಮೂಲಕವೇ ನಿರ್ವಹಿಸುತ್ತಿದ್ದಾರೆ. ಶ್ರವಣ ಸಾಧನದಿಂದ ಅವರಿಗೆ ಶಬ್ದ ಗ್ರಹಿಸಲು ನೆರವಾಗಲಿದೆ. ಈ ಸಾಧನ ಉತ್ತಮವಾಗಿ ಹಾಗೂ ಸುರಕ್ಷಿತವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಇಷ್ಟು ದಿನ ಶಬ್ದದ ಗ್ರಹಿಕೆಯಿಲ್ಲದೆ ಶಾಲೆಯಲ್ಲಿ ಪಾಠ ಕೇಳುವಂತಾಗಿತ್ತು. ಶ್ರವಣ ಸಾಧನ ಅಳವಡಿಕೆಯಿಂದ ಕೇವಲ ಸನ್ನೆಯ ಮೂಲಕವಲ್ಲದೆ, ಶಬ್ದ ಕೇಳುವ ಸುಯೋಗವೂ ಸಿಕ್ಕಿದೆ. ಕಲಿಕೆಗೂ ಹೆಚ್ಚು ಸಹಾಯವಾಗಲಿದೆ ಎಂದರು.

ಕ್ಯಾನ್‌ಫಿನ್ ಹೋಮ್ಸ್ ಸಿಇಒ ಸುರೇಶ್ ಎಸ್.ಐಯ್ಯರ್ ಮಾತನಾಡಿ, ಯಾವುದೇ ಒಂದು ದೈಹಿಕ ದೋಷವು ನ್ಯೂನತೆಯಲ್ಲ. ಅದಕ್ಕೂ ಹೆಚ್ಚಾಗಿ ಬೇರೊಂದು ವಿಶೇಷತೆ ಅವರಲ್ಲಿರುತ್ತದೆ. ಪ್ರತಿ ಮಕ್ಕಳಲ್ಲೂ ವಿಶೇಷ ಪ್ರತಿಭೆ ಇರುತ್ತದೆ. ಇಂತಹ ಮಕ್ಕಳಿಗೆ ಉತ್ತಮ ಭವಿಷ್ಯ ಸಹ ಇರುತ್ತದೆ. ಆದ್ದರಿಂದ ಬದುಕಿನಲ್ಲಿ ಎಲ್ಲ ಸಮಸ್ಯೆ ನಿವಾರಿಸಿಕೊಂಡು ಮುಂದೆ ನಡೆಯಬೇಕು. ಸಾಧನೆಯ ಹಾದಿಯಲ್ಲಿ ಸಾಗಿ ಕನಸಿನ ಗುರಿ ತಲುಪಬೇಕು ಎಂದರು

ಶ್ರವಣ ದೋಷವುಳ್ಳ 5 ಶಾಲೆಗಳ 150 ವಿದ್ಯಾರ್ಥಿಗಳಿಗೆ ಶ್ರವಣ ಸಾಧನ ವಿತರಣೆ ಮಾಡಲಾಯಿತು. ಕ್ಯಾನ್‌ಫಿನ್ ಹೋಮ್ಸ್ ಅಧ್ಯಕ್ಷ ಪ್ರಕಾಶ್ ಶ್ಯಾನ್‌ಭೋಗ್, ಉಪ ಮಹಾ ಪ್ರಬಂಧಕ ಪ್ರಶಾಂತ್ ಜೋಷಿ, ಕೆನರಾ ಬ್ಯಾಂಕ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ.ಎನ್.ಶಾಮರಾವ್, 317ಜಿ ಲಯನ್ಸ್ ಕ್ಲಬ್‌ನ ಜಿಲ್ಲಾ ಪ್ರಾಂತಪಾಲ ಕೆ.ಎಲ್.ರಾಜಶೇಖರ್, ಮೈಸೂರು ಡಿಸ್ಟ್ರಿಕ್ಟ್ ಡ್ೆ ಅಸೋಸಿಯೇಷನ್ ಅಧ್ಯಕ್ಷ ಎಸ್.ಮೂರ್ತಿ, ಉಪಾಧ್ಯಕ್ಷ ಮಹೇಶ್ ವರ್ಮ, ಲಯನ್ಸ್ ಕ್ಲಬ್ ಮೈಸೂರು ಅಧ್ಯಕ್ಷ ಕುಮಾರ್, ಸುಮಿತ್ರ ಮೂರ್ತಿ, ಜಯಕುಮಾರ್, ಶ್ರೀನಿವಾಸ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net